Janardhan Kodavoor/ Team KaravaliXpress
29 C
Udupi
Wednesday, December 2, 2020

ಚಿತ್ರಕಲಾ ಪ್ರತಿಭೆ ಶ್ರೀರಕ್ಷಾ ಗುಂಡಿಬೈಲು

 ಸ್ವಯಂಸ್ಪೂರ್ತಿಯೇ ಗುರುವಾಗಿ ಮೈ ಮನಸ್ಸುಗಳನ್ನು ಆವರಿಸಿದ ಫಲವಾಗಿ ಉಡುಪಿಯ ಶ್ರೀರಕ್ಷಾ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಇಂದು ಅತ್ಯುತ್ತಮ ಚಿತ್ರ ಕಲಾವಿದೆಯಾಗಿ ಹಲವರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಪೆನ್ಸಿಲ್ ಆರ್ಟ್ ಮತ್ತು ಪೈಂಟಿಂಗ್ ನಲ್ಲಿ ಹತ್ತು ಹಲವು ಸ್ಪರ್ಧೆಗಳಲ್ಲೂ ಭಾಗವಹಿಸಿ ಈಗಾಗಲೇ ಸಾಕಷ್ಟು ಬಹುಮಾನಗಳನ್ನೂ ಪಡೆದುಕೊಂಡಿರುವ ಶ್ರೀರಕ್ಷಾ, ಉಡುಪಿ ನಗರದ ಒಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆ ದಿರುವ ವಿದ್ಯಾರ್ಥಿನಿ. ಉಡುಪಿ ನಗರದ ಗುಂಡಿಬೈಲು ನಿವಾಸಿಯಾಗಿರುವ ದಯಾನಂದ ಪೂಜಾರಿ ಹಾಗೂ ನೀತಾ ದಂಪತಿಗಳ ಪುತ್ರಿಯಾಗಿರುವ ಶ್ರೀರಕ್ಷಾಳಿಗೆ ಚಿತ್ರಕಲೆ ಮೂಲತಹ ಒಲಿದು ಬಂದ ಕಲೆ.

ಚಿಕ್ಕಂದಿನಲ್ಲಿಯೇ ಸಿಕ್ಕಿಸಿಕ್ಕಿದ ಕಾಗದಗಳಲ್ಲಿ ಚಿತ್ರ ಗೀಚಲು ಶುರು ಮಾಡಿದ್ದ ಶ್ರೀರಕ್ಷಾಳಿಗೆ ಬರಬರುತ್ತಾ ಇದರಲ್ಲಿ ವಿಶೇಷವಾದ ಆಸಕ್ತಿ ಮೂಡಿತು, ಪ್ರೀತಿ ಹುಟ್ಟಿತು‌ ಇದರ ಫಲವಾಗಿ ಗೀಚಿದ ಒಂದೊಂದು ಚಿತ್ರವೂ ಹಲವರ ಕಣ್ಣರಳುವಂತೆ ಮಾಡಿತು, ಮೆಚ್ಚು ಗೆಗೆ ಪಾತ್ರವಾಗತೊಡಗಿತು. ಸಹಜವಾಗಿಯೇ ಮನೆಯವರ ಪ್ರೋತ್ಸಾಹವೂ ಸಿಕ್ಕಿತು. ಬಾಲ್ಯದಲ್ಲಿ ಕೆಲ ವರ್ಷಗಳ ಕಾಲ ಹೆತ್ತವ ರೊಂದಿಗೆ ಮುಂಬೈನಲ್ಲಿದ್ದ ಶ್ರೀರಕ್ಷಾ, ಬಳಿಕ ತಾಯಿಯೊಂದಿಗೆ ಊರಿಗೆ ಮರಳಿದಳು. ಒಂದರಿಂದ ಏಳನೇ ತರಗತಿಯ ವರೆಗೆ ಉಡುಪಿಯ ಮುಕುಂದಕೃಪಾ ಶಾಲೆಯಲ್ಲಿ ಕಲಿತರೆ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಒಳಕಾಡು ಶಾಲೆಯಲ್ಲಿ ಮಾಡಿದಳು.

ಯಾವಾಗ ಚಿತ್ರಕಲೆಯಲ್ಲಿ ಮನೆಯವರ, ನೆರೆಕರೆಯವರ, ಬಂಧು ಬಳಗದವರ, ಸಹಪಾಠಿಗಳ, ಶಿಕ್ಷಕರ ಗಮನ ಸೆಳೆಯುವಷ್ಟು ಬೆಳೆದುಬಿಟ್ಟಳೋ, ಬಳಿಕ ಶ್ರೀರಕ್ಷಾ ಚಿತ್ರಕಲಾ ಸ್ಪರಗಧೆಯಲ್ಲೂ ಭಾಗವಹಿಸಿದಳು. ಅನೇಕ ಬಹುಮಾನಗಳನ್ನು ತನ್ನದನ್ನಾಗಿ ಸಿಕೊಂಡಳು. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎರಡು ವರ್ಷವೂ ಬಹುಮಾನಗಳನ್ನು ಮುಡಿಗೇರಿಸಿಕೊಂಡ ಶ್ರೀರಕ್ಷಾ, ಮಣಿಪಾಲದ ‘ಪವರ್’, ಇಸ್ಕಾನ್ ಸಹಿತ ವಿವಿಧ ಸಂಘ ಸಂಸ್ಥೆಗಳು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾಳೆ.

ಚಿತ್ರಕಲೆಯಲ್ಲಿ ಶ್ರೀರಕ್ಷಾಳಿಗಿದ್ದ ಅಪಾರವಾದ ಆಸಕ್ತಿಯನ್ನು ಗಮನಿಸಿದ ಮನೆಯವರು, ಈ ಈಕೆಯನ್ನು ಪ್ರೋತ್ಸಾಹಿಸುವ ದೃಷ್ಟಿ ಯಿಂದ ಕಳೆದ ವರ್ಷ ಉಡುಪಿಯ ದೃಶ್ಯ ಸ್ಕೂಲ್ ಆಫ್ ಆರ್ಟ್ಸ್ ಗೆ ವಾರದಲ್ಲಿ ಎರಡು ದಿನ ಚಿತ್ರಕಲಾ ಶಿಕ್ಷಣಕ್ಕೆ ಕಳುಹಿಸಿ ಕೊಡುತ್ತಿದ್ದಾರೆ.ಕಳೆದ ವರ್ಷ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸಿದ ಚಿತ್ರಕಲಾ ಪರೀಕ್ಷೆಯಲ್ಲೂ ಶ್ರೀರಕ್ಷಾ ಉತ್ತಮ ಅಂಕಗಳೊಂದಿಗೆ ಪ್ರಮಾಣಪತ್ರ ಪಡೆದಿದ್ದಾಳೆ.

ಶ್ರೀರಕ್ಷಾಳಿಗೆ ಚಿತ್ರಕಲೆ ಒಲಿದುಬಂದ ಪ್ರತಿಭೆ. ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಈಕೆಗೆ ದೊರೆತದ್ದೇ ಆದಲ್ಲಿ ಚಿತ್ರಕಲಾ ಕ್ಷೇತ್ರದ ಅಪ್ರತಿಮ ಪ್ರತಿಭೆಯಾಗಿ ಶ್ರೀರಕ್ಷಾ ಬೆಳೆದು ಹೆಸರು ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ‌. 

✍️ ಶ್ರೀರಾಮ ದಿವಾಣ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಹತಾಶ ಮಾಜಿ ಮುಖ್ಯಮಂತ್ರಿಗ​ಳಿಂದ ಮುಂದುವರಿದ ಅಪ್ರಬುದ್ಧ ಹೇಳಿಕೆಗಳು​~ ಕ್ಯಾಪ್ಟನ್ ಗಣೇಶ್ ಕಾರ್ಣಿಕ್​. 

ಬೆಂಗಳೂರು: ಲವ್ ಜಿಹಾದ್ ವಿರುದ್ಧ ಕಾನೂನು ತರುವ ಸರಕಾರದ ಪ್ರಯತ್ನದ ವಿರುದ್ಧ ಮಾನ್ಯ​ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸಂವಿಧಾನ ವಿರೋಧಿ ಮ​ತ್ತು ಪ್ರಜಾಪ್ರಭುತ್ವ ವಿರೋಧಿ ಎಮಾಧ್ಯಮ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್...

ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ ಕಟ್ಟಡವನ್ನು ಉದ್ಘಾಟನೆ 

ನಬಾರ್ಡ್ ಸಹಯೋಗದ ಅರ್ ಐ ಡಿ ಎಪ್ ಯೋಜನೆಯಡಿಯಲ್ಲಿ ರೂಪೈ ಒಂದು ಕೋಟಿ ಎಂಟು ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಬಾಲಕಿಯರ ಸರಕಾರಿ ಪ ಪೂ ಕಾಲೇಜಿನ ಎರಡು ಅಂತಸ್ತಿನ ನೂತನ...

ಸುಗಮ ಚುನಾವಣೆಗೆ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಿ: ಡಿಸಿ ಜಿ.ಜಗದೀಶ್

ಉಡುಪಿ:  ಜಿಲ್ಲೆಯಲ್ಲಿ ಡಿಸೆಂಬರ್ 22 ಮತ್ತು 27 ರಂದು ನಡೆಯುವ ಎರಡು ಹಂತದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು, ಸುಗಮವಾಗಿ ಮತ್ತು ಯಾವುದೇ ಲೋಪಗಳಿಲ್ಲದೇ ನಡೆಸಲು ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯಂತೆ ಕಾರ್ಯ...

ಬೋಟ್ ದುರಂತ: ಕಣ್ಮರೆಯಾಗಿದ್ದ ಎಲ್ಲಾ ಮೀನುಗಾರರ ಮೃತದೇಹ ಪತ್ತೆ

ಮಂಗಳೂರಿನಲ್ಲಿ ಮಂಗಳೂರಿನಲ್ಲಿ ನಡೆದ ಮತ್ತೊಂದು ದೋಣಿ ದುರಂತದಲ್ಲಿ ಮುಳುಗಿದ್ದವರಿಗಾಗಿ ಸತತ ಶೋಧ ಕಾರ್ಯದ ಬಳಿಕ ದುರಂತದಲ್ಲಿ ಮಡಿದ ಎಲ್ಲಾ ಆರು ಮಂದಿ ಮೀನುಗಾರರ ಮೃತದೇಹವನ್ನು ಮುಳುಗುತಜ್ಞರು ಪತ್ತೆ ಹಚ್ಚಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ...

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ

ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ರೈಲು ಮತ್ತೆ ಆರಂಭವಾಗಿದೆ. ಈ ರೈಲು ವಾರದಲ್ಲಿ ನಾಲ್ಕು ದಿನ ಸಂಚರಿಸಲಿದ್ದು, ನಾಗರಿಕರು ಇದರ ಸದುಪಯೋಗ ಪಡೆಯಬೇಕೆಂದು ಸಂಸದ ನಳಿನ್ ಕುಮಾರ್...
error: Content is protected !!