ರಂಗೋಲಿಯಲ್ಲಿ 76 ನಿಮಿಷಗಳಲ್ಲಿ 76 ರಾಷ್ಟ್ರಧ್ವಜ ವಿಶ್ವದಾಖಲೆ-ಡಾ.ಭಾರತಿ ಮರವಂತೆ

ತಮಿಳುನಾಡಿನ Mayiladuthurai ಜಿಲ್ಲೆಯಲ್ಲಿ ಜಾಕಿಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆಯವರು(ಜಾಕಿ ಕ್ರಿಯೇಶನ್ಸ್) ಆಯೋಜಿಸಿದ ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ದಾಖಲೆಯಲ್ಲಿ ರಂಗೋಲಿ ಕಲಾವಿದ ಡಾ.ಭಾರತಿ ಮರವಂತೆಯವರು ಸಂಪೂರ್ಣ ಯಶಸ್ವಿಯಾಗಿದ್ದಾರೆ.

ದಿನಾಂಕ-21-ಆಗಸ್ಟ್-2022ರಂದು ಅಂತರ್ಜಾಲದ ಮೂಲಕ ಡಾ.ಭಾರತಿ ಮರವಂತೆಯವರು ಸಂಸ್ಥೆಯವರು ಸೂಚಿಸಿದ ನಿರ್ಧಿಷ್ಟ ಸಮಯದಲ್ಲಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ಅನನ್ಯ ಕೌಶಲದಿಂದ ಏಕವ್ಯಕ್ತಿಯಾಗಿ ಬೃಹತ್ ಗಾತ್ರದ(30 25ಅಡಿ)ಲ್ಲಿ ಧ್ವಜದ ಪ್ರಮಾಣತೆಗೆ ಅನುಗುಣವಾಗಿ(2ಅನುಪಾತದಲ್ಲಿ ಮತ್ತು ತ್ರಿವರ್ಣ-ಚಕ್ರ( 24ಗೆರೆಗಳು ಚಿತ್ರದಲ್ಲಿ ನೋಡಬಹುದು)ವನ್ನು 76 ರಾಷ್ಟ್ರಧ್ವಜಗಳನ್ನು 76 ನಿಮಿಷಗಳ ಅವಧಿಗೆ ಮುಂಚಿತವಾಗಿ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ದೇಶಭಕ್ತಿ ಹುಟ್ಟಿಸುವ ಈ ಕಲಾ ಪ್ರದರ್ಶನದಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ರಾಷ್ಟ್ರಗಳ ಕಲಾವಿದರು. ವಿವಿಧ ಕೌಶಲ್ಯಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ತಮಿಳುನಾಡಿನ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯವರು ನೀಡಿರುವ ಪ್ರಮಾಣಪತ್ರ, ಟ್ರೋಪಿ, ಮೆಡಲ್, ಬ್ಯಾಡ್ಜ್, ಟಿಶರ್ಟ್ ಇತ್ಯಾದಿಗಳನ್ನು ನೀಡಿ ಡಾ.ಭಾರತಿ ಮರವಂತೆಯವರನ್ನು ಗೌರವಿಸಿರುವುದು ಚಿತ್ರದಲ್ಲಿ ಕಾಣಬಹುದು. ತಮಿಳುನಾಡಿನ ನಿರ್ಧಿಷ್ಟ ಸ್ಥಳದಲ್ಲಿ ಮತ್ತು ಅಂತರ್ಜಾಲದಲ್ಲಿ ನಡೆದಿರುವ ಈ ಪ್ರದರ್ಶನದಲ್ಲಿ ಡಾ.ಭಾರತಿ ಮರವಂತೆಯವರು ಅಂತರ್ಜಾಲದ ಮೂಲಕ ರಂಗೋಲಿ ಕಲೆಯನ್ನು ಪ್ರದರ್ಶಿಸಿದ್ದರು. ಈ ಸಂದರ್ಭದ ಬೃಹತ್ ಗಾತ್ರದ ರಂಗೋಲಿ ಕಲಾಪ್ರದರ್ಶನವನ್ನು ವೀಡಿಯೋ ಛಾಯಾಚಿತ್ರಗಳ ಮೂಲಕ ಕಾಯ್ದಿರಿಸಲಾಗಿದೆ. ಭಾರತದ ಸಾಂಸ್ಕೃತಿಕ ಕಲೆಯ ಉಳಿವಿನ ಮತ್ತು ದೇಶಭಕ್ತಿ ಹುಟ್ಟಿಸುವ ವಿಷಯವಾಗಿರುವ ಈ ರಂಗೋಲಿ ಕಲಾಪ್ರದರ್ಶನ ಸರ್ವರ ಮೆಚ್ಚುಗೆಗೆ ಪಾತ್ರವಾಗಿತ್ತು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply