ನರೇಂದ್ರ ಮೋದಿಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಕಾರ್ಯಗತಗೊಳಿಸಿದ ಬೆಲ್ ಓ ಸೀಲ್

 
ಉಡುಪಿ: ಬೆಲ್ ಓ ಸೀಲ್ ವಾಲ್ವ್ಸ್ ನಲ್ಲಿ 26 ಇಂಚಿನ ಮೋಟಾರ್ ಚಾಲಿತ ಮತ್ತು ರಿಮೋಟ್ ಕಂಟ್ರೋಲ್ಡ್ ಬೆಲ್ಲೊ ಸೀಲ್ ಗೇಟ್ ವಾಲ್ವ್ಸ್ ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಈ ರೀತಿಯ ವಾಲ್ವ್ಸಗಳನ್ನು ಉತ್ಪಾದಿಸುವ ವಿಶ್ವದ ಮೊದಲ ಕಂಪನಿಯಾಗಿ ಬೆಲ್ ಓ ಸೀಲ್ ವಾಲ್ವ್ಸ್ ಮೂಡಿಬಂದಿದೆ.

ಉಡುಪಿಯ ಬೆಲ್ ಓ ಸೀಲ್ ವಾಲ್ವ್ಸ್ ಪ್ರೈವೇಟ್ ಲಿಮಿಟೆಡ್, ಮೋಟರ್ ಆಪರೇಟೆಡ್ ಮತ್ತು ರಿಮೋಟ್ ಕಂಟ್ರೋಲ್ಡ್ ಬೆಲ್ಲೊ ಸೀಲ್ಡ್ 26 ಇಂಚಿನ ಗೇಟ್ ವಾಲ್ವ್ಸಗಳನ್ನು ತನ್ನ ಕಾರ್ಖಾನೆಯಲ್ಲಿ ಯಶಸ್ವಿಯಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ, ಈ ವಿಶೇಷ ರೀತಿಯ ವಾಲ್ವ್ಸಗಳನ್ನು ಉತ್ಪಾದಿಸಿದ ವಿಶ್ವದ ಮೊದಲ ವಾಲ್ವ್ ಉತ್ಪಾದನಾ ಕಂಪನಿಯಾಗಿದೆ. 

ಈ ದೈತ್ಯ ಗಾತ್ರದ ವಾಲ್ವ್ಗಳನ್ನು ಬೆಲ್ ಓ ಸೀಲ್ ವಾಲ್ವ್ಸ್ ಸವಾಲಾಗಿ ಸ್ವೀಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ “ಮೇಕ್ ಇನ್ ಇಂಡಿಯಾ” ಪರಿಕಲ್ಪನೆಯ ಕನಸುಗಳನ್ನು ಸಾಕಾರಗೊಳಿಸಿದೆ. ವಾಲ್ವ್ ಗಳು ತಲಾ 2 ಟನ್‌ಗಳಷ್ಟು ತೂಕವನ್ನು ಹೊಂದಿದೆ ಮತ್ತು ಸುಮಾರು 5 ಮೀಟರ್ ಎತ್ತರವಿದೆ. ಈ ಕವಾಟಗಳನ್ನು ಅಪಾಯಕಾರಿ ದ್ರವವನ್ನು ನಿರ್ವಹಿಸಲು ಬಳಸಲಾಗುತ್ತದೆ.
 ಬೆಂಜೀನ್ ಮತ್ತು ಬ್ಯೂಟಾಡೈಯೀನ್ ದ್ರವಗಳ ಅಪಾಯಕಾರಿ ಸ್ವಭಾವದಿಂದಾಗಿ ವಾಲ್ವ್ ಗಳು ಫ್ಯೂಜಿಟೀವ್ ಎಮಿಶನ್ ಅರ್ಹತ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ವಾಲ್ವ್ಸ್ ಗಳ ಉತ್ಪಾದನೆಯಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿಯ ಕುರಿತು ಅನೇಕ ಸವಾಲುಗಳನ್ನು ಎದುರಿಸಿದ್ದರೂ ಸಹ ಬೆಲ್ ಓ ಸೀಲ್ ಎಂಜಿನಿಯರ್‌ಗಳ ತಂಡವು ಈ ಸವಾಲುಗಳನ್ನು ಒಪ್ಪಿಕೊಂಡು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ.

ಬೆಲ್ ಓ ಸೀಲ್ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕುಮಾರ್ ಸಲೀನ್ಸ್ ಅವರ ನಿರಂತರ ಪ್ರೇರಣೆ, ಪ್ರೋತ್ಸಾಹ, ಬೆಂಬಲದಿಂದ ಇದು ಸಾಧ್ಯವಾಗಿದೆ. ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್, ಅಂದರೆ ಭಾರತ ಸರಕಾರವು ಘೋಷಿತ ನವರತ್ನ ಕಂಪನಿಯಾದ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್), ವಿನ್ಯಾಸಗಳ ಅನುಮೋದನೆ ಮತ್ತು ಕೈಗೊಳ್ಳಬೇಕಾದ ವಿವಿಧ ಪರೀಕ್ಷೆಗಳಿಗೆ ಸಾಕ್ಷಿಯಾಯಿತು. 

ಬೆಲ್ ಓ ಸೀಲ್ ವಾಲ್ವ್ಸ್ ತಯಾರಿಸಿದ ಈ “ಜೀರೊ ಎಮಿಶನ್” ವಾಲ್ವ್ಸ್ ಗಳು ಜನರ ಸುರಕ್ಷತೆಯನ್ನು ಖಾತ್ರಿಪಡಿಸುವುದಲ್ಲದೆ, ಹೊರಸೂಸುವಿಕೆಯನ್ನು ಕಡಿತಗೊಳಿಸುವ ಮೂಲಕ ಪರಿಸರ ಮತ್ತು ಪ್ರಕೃತಿಯನ್ನು ಉಳಿಸುವಲ್ಲಿ ಬದ್ಧವಾಗಿದೆ. ವಾಲ್ವ್ಗಳನ್ನು ಎಚ್‌ಪಿಸಿಎಲ್-ಮಿತ್ತಲ್ ಎನರ್ಜಿ ಲಿಮಿಟೆಡ್‌ (ಎಚ್‌ಎಂಇಎಲ್) ಫಾರ್ಚೂನ್ 500 ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಭಾರತ ಸರಕಾರದ ಉದ್ಯಮ ಮತ್ತು ಮಿತ್ತಲ್ ಎನರ್ಜಿ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್-ಸಿಂಗಾಪುರ ಇವರಿಗೆ ಸರಬರಾಜು ಮಾಡಲಾಗುತ್ತದೆ.
ಅಲ್ಲದೆ ಪಂಜಾಬ್‌ನ ಎಚ್‌ಎಂಇಎಲ್‌ನ ಗುರು ಗೋಬಿಂದ್ ಸಿಂಗ್ ಪಾಲಿಮರ್ ಯೋಜನೆಯಲ್ಲಿ ವಾಲ್ವ್ಸಗಳನ್ನು ಅಳವಡಿಸಲಾಗುವುದು. ರಿಮೋಟ್ ಕಂಟ್ರೋಲ್ಡ್ ಮೋಟಾರ್ ಚಾಲಿತ ವಾಲ್ವ್ಸಗಳನ್ನು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಕಂಪನಿ ಎಂಬ ಖ್ಯಾತಿಗೆ ಬೆಲ್ ಓ ಸೀಲ್ ವಾಲ್ವ್ಸ್ ಪಾತ್ರವಾಗಿದ್ದು, ಈ ಕ್ಷೇತ್ರದಲ್ಲಿ ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.
 
 
 
 
 
 
 
 
 
 
 

Leave a Reply