ವಿಶ್ವನಾಥ್ ಭಾಸ್ಕರ್ ಗಾಣಿಗನಿಗೆ 3 ಚಿನ್ನದ ಪದಕ

ತಮಿಳುನಾಡಿನ ಕೋಯಂಬತ್ತೂರುನಲ್ಲಿ ಫೆ 17 ರಿಂದ 21 ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್-2021 ರಲ್ಲಿ ಕರ್ನಾಟಕ ತಂಡ ವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗ  93 ಕೆಜಿ ದೇಹತೂಕ ವಿಭಾಗದಲ್ಲಿ 3 ಚಿನ್ನದ ಪದಕ ಗಳಿಸಿರುತ್ತಾರೆ.

 ಸ್ಕ್ವಾಟ್ ನಲ್ಲಿ 327.5 ಕೆಜಿ ಬೆಂಚ್ ಪ್ರೆಸ್ ನಲ್ಲಿ 180 ಕೆಜಿ ಡೆಡ್ ಲಿಫ್ಟ್ ವಿಭಾಗದಲ್ಲಿ 320 ಕೆಜಿ ಭಾರ ಎತ್ತುವ ಮೂಲಕ ಒಟ್ಟು 827.5 ಕೆಜಿ ಭಾರ ಎತ್ತುವ ಮೂಲಕ 3 ಚಿನ್ನದ ಪದಕ ಪಡೆದಿರುತ್ತಾರೆ.  ಬೆಂಗಳೂರಿನ ಪ್ರತಿಷ್ಠಿತ ಬಾಲಾರ್ಕ ಫಿಟ್ನೆಸ್ ಅಂಡ್ ಫಿಸಿಯೋಥೆರಪಿ ಸೆಂಟರ್ ನಲ್ಲಿ ತರಬೇತಿ ಪಡೆದಿರುತ್ತಾರೆ . ಹಾಗು ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ವಿಭಾಗದಲ್ಲಿ ಧಾಖಲೆ ಕೂಡ ಹೊಂದಿದ್ದು 2019 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುತ್ತಾರೆ.

 
 
 
 
 
 
 
 
 
 
 

Leave a Reply