ಶಿಕ್ಷಣತಜ್ಞ, ಪರಿಸರವಾದಿ, ಶಿಕ್ಷಕ, ಸಂಶೋಧಕ ಮತ್ತು ಸಾಮಾಜಿಕ ಪ್ರಭಾವವಿಕ ಡಾ ಬಾಲಕೃಷ್ಣ ಮದ್ದೋಡಿ ಅವರಗೆ ಪರಿಸರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಸೇವಾ ಕೊಡುಗೆಗಾಗಿ ಅಟಲ್ ಸಾಧನೆ ಪ್ರಶಸ್ತಿ 2022- ಪರಿಸರ ಶಿಕ್ಷಣ ಮತ್ತು ಸಾಮಾಜಿಕ ಪ್ರಭಾವದಲ್ಲಿ ಅತ್ಯುತ್ತಮ ಶಿಕ್ಷಣಶಾಸ್ತ್ರ ದೊಂದಿಗೆ ಅತ್ಯಂತ ನವೀನ ಅಧ್ಯಾಪಕರು ಪ್ರಶಸ್ತಿಯನ್ನ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಾಧನೆ ಪ್ರಶಸ್ತಿ 2022 ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾರತ ಸರ್ಕಾರದ ಕೇಂದ್ರ ಮತ್ತು ರಾಜ್ಯ ಸಚಿವರು ಗೌರವ ಪ್ರಶಸ್ತಿ ನೀಡಿದರು. ಪಾರಿತೋಷಕ, ಪ್ರಶಸ್ತಿ ಪ್ರಮಾಣ ಪತ್ರವನ್ನು ಭಾರತ ಸರ್ಕಾರದ ಸಮಾಜ ಕಲ್ಯಾಣ ರಾಜ್ಯ ಸಚಿವ ಶ್ರೀ ರಾಮದಾಸ್ ಅಠವಳೆ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಶ್ರೀ ಅಶ್ವಿನ್ ಕುಮಾರ್ ಚೌಬಾಯ್, ಶ್ರೀ ಸೈಯದ್ ಶಾನವಾಜ್ ಹುಸೇನ್ ಬಿಜೆಪಿ ವಕ್ತಾರ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಸಚಿವ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾಡಳಿತದಿಂದ ಡಾ ಬಾಲಕೃಷ್ಣ ಮದ್ದೋಡಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು