ಕಾತ್ಯಾಯಿನಿ ಕುಂಜಿಬೆಟ್ಟು ಅವರ”ಅವನು ಹೆಣ್ಣಾಗಬೇಕು” ಕೃತಿ ಲೋಕಾರ್ಪಣೆ

 ಉಡುಪಿ: ಸಾಹಿತಿ ಹಾಗೂ ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನ ಸಂಕಲನ ‘ಅವನು ಹೆಣ್ಣಾಗಬೇಕು’ ಕೃತಿ ಬಿಡುಗಡೆ ಸಮಾರಂಭವು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ವತಿಯಿಂದ ಎಂ.ಜಿ.ಎಂ ಕಾಲೇಜು ಉಡುಪಿ ಇದರ ಸಹಯೋಗದೊಂದಿಗೆ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಫೆ.20ರಂದು ನಡೆಯಿತು. ಕನ್ನಡದ ಹಿರಿಯ ಸಾಹಿತಿ ನಾಟಕಗಾರ ಎಸ್. ಎನ್. ಸೇತುರಾಂ ಕೃತಿ ಬಿಡುಗಡೆ ಮಾಡಿ “ಯಾವುದೇ ಒಂದು ಕಾವ್ಯವನ್ನು ನವೋದಯ , ನವ್ಯ , ನವ್ಯೋತ್ತರ ಎಂದು ಬ್ರ್ಯಾಂಡ್ಗಳಿಗೆ ಒಗ್ಗಿಸುವುದೇ ತಪ್ಪು. ಇದೇನು ಬಟ್ಟೆ ತೊಳೆಯುವ ಸೋಪಾ? ಡಿಟಜೆ೯ಂಟಾ?ಓದಿದಾಗ ನನ್ನಲ್ಲಿ ಒಂದು ಭಾವ ಕೆದರಿತು, ಕಣ್ಣಲ್ಲಿ ನೀರು ತುಂಬಿಕೊಂಡಿತು ಅಥವಾ ಸಣ್ಣ ನಗುವೋ ರೋಷವೋ ಬಂತು! ಅವಾ ಬದುಕಿನ ಯಾವುದೋ ಒಂದನ್ನು ಬದಲಾಯಿಸುವ ಅನ್ನಿಸಿತು ಇಷ್ಟು ಸಾಕಾಗಲ್ವ?” ಎಂದರು. ಚಲನಚಿತ್ರ ಹಾಗೂ ನಾಟಕ ನಿರ್ದೇಶಕ ಕಾಸರಗೋಡು ಚಿನ್ನಾ ಸಭಾಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸುಧಾ ಆಡುಕಳ ಕೃತಿ ವಿಮರ್ಶೆ ಮಾಡಿದರು.

 

 ಎಂ.ಜಿ. ಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ್,ಎಂ.ಯು.ಪಿ ಪ್ರಧಾನ ಸಂಪಾದಕ ಪ್ರೊ. ನೀತಾ ಇನಾಂದಾರ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ ಸ್ವಾಗತಿಸಿದರು.ಶಿಲ್ಪ ಜೋಷಿ ಕಾಯ೯ಕ್ರಮವನ್ನು ನಿರೂಪಿಸಿ, ಸುಗುಣ ಸುವಣ೯ ವಂದಿಸಿದರು.ಪ್ರಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಕಲಾವಿದರು ಅಭಿನಯಿಸುವ ಬೀದಿ ನಾಟಕ ‘ ಆರೋಗ್ಯ ಭಾರತ ಪ್ರದರ್ಶನಗೊಂಡಿತು.

 
 
 
 
 
 
 
 
 
 
 

Leave a Reply