ಸ್ವರ್ಣ ಪದಕಗಳ ಸರದಾರ ಆಸ್ಟ್ರೋ ಮೋಹನ್ ಮಡಿಲಿಗೆ ಮಗದೊಂದು ಸ್ವರ್ಣ ಪದಕ ಸೇರ್ಪಡೆ

ಉಡುಪಿ: ಫೋಟೋಗ್ರಫಿ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದ 19 ನೇ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ರ ಚಿತ್ರಕ್ಕೆ ಫೋಟೋಗ್ರಾಫಿ ಸೊಸೈಟಿ ಅಮೇರಿಕಾದ ಸ್ವರ್ಣ ಪ್ರಶಸ್ತಿ ಲಭಿಸಿದೆ.

ಶ್ರವಣಬೆಳಗೊಳದ ಗೋಮಟೇಶ್ವರ ಚಿತ್ರಕ್ಕೆ ಅತ್ಯುತ್ತಮ ವಾಸ್ತುಶಿಲ್ಪ ವಿಭಾಗದಲ್ಲಿ ಈ ಪ್ರಶಸ್ತಿ ಬಂದಿದೆ.ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವದ 47 ದೇಶಗಳಿಂದ 5688 ಛಾಯಾಚಿತ್ರಗಳು ಆಗಮಿಸಿದ್ದವು.26 ವರ್ಷಗಳ ಸುಧೀರ್ಘ ಅವಧಿಯಲ್ಲಿ ಆಸ್ಟ್ರೊ ಮೋಹನ್ ಸುಮಾರು 471 ರಾಷ್ಟ್ರೀಯ,ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

 

 
 
 
 
 
 
 
 
 
 
 

Leave a Reply