ಕೊಡವೂರಿನ ಗೋಪಾಲಕರಿಗೆ ಹಾಗೂ ಸಾಧಕರಿಗೆ ಗೌರವಾರ್ಪಣೆ.

ಕೊಡವೂರು ಜನತೆಗೆ  ಅಮೃತದಂತಹ ಹಾಲು ನೀಡಿ ಆರೋಗ್ಯ ಕಾಪಾಡಿಕೊಂಡು ಬರಲು ಸಹಕರಿಸಿದ ಗೋಪಾಲಕರಿಗೆ (ಹೈನುಗಾರಿಕೆ) ನಾಗರಿಕರ ಪರವಾಗಿ ಪಂಚ ಧೂಮಾವತಿ ದೈವಸ್ಥಾನ ಜುಮಾದಿನಗರ  ಬ್ರಾಹ್ಮನ ವಲಯ ಸಮಿತಿ ಕೊಡವೂರು, ವಾರ್ಡ್ ಅಭಿವೃದ್ಧಿ ಸಮಿತಿ ಕೊಡವೂರು ವತಿಯಿಂದ ಹಾಗೂ ನಗರ ಸಭಾ ಸದಸ್ಯ  ಕೆ ವಿಜಯ್ ಕೊಡವೂರು ಇವರ ಮುಂದಾಳತ್ವದಲ್ಲಿ ನಡೆಯಿತು.

ಕೊಡವೂರು ವಾರ್ಡಿನ ಗೋಪಾಲಕರಿಗೆ ಮತ್ತು ಸಾಧಕರಿಗೆ ಮತ್ತು ನೆರೆಯ ಸಂದರ್ಭದಲ್ಲಿ ದೋಣಿಯ ಮುಖಾಂತರ ಕೊಡವೂರು ಜನತೆಯನ್ನು ರಕ್ಷಣೆ ಮಾಡಿದ  ಪ್ರಕಾಶ್ ತಿಂಗಳಾಯ ವೀರ ಕೇಸರಿ(ರಿ.) ಪ್ರತಿಷ್ಠಾನ ಕನಕೋಡ ಪಡುಕೆರೆ ಇದರ ಅಧ್ಯಕ್ಷರನ್ನು ಸದಸ್ಯರನ್ನು ಗೌರವಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಕಾಂತ್ ಶೆಟ್ಟಿ ಮಾತನಾಡಿ ಗೋವಿನ ಮಹತ್ವದ  ಜೊತೆಯಲ್ಲಿ ಗೋವಿನಿಂದ ನಾವು ನಮ್ಮಿಂದ ಗೋವು ಅಲ್ಲಿ ಗೋವು ಉಳಿದರೆ ಮನುಕುಲ ಉಳಿಸಲು ಸಾಧ್ಯವಿದೆ ಎಂದರು. ನಗರ ಸಭಾ ಸದಸ್ಯ ಕೆ ವಿಜಯ್ ಕೊಡವೂರು ಮಾತನಾಡಿ ವಿದ್ಯಾವಂತ – ಬುದ್ದಿವಂತ ಮಾನವನ ನಿರ್ಲಕ್ಷ್ಯದಿಂದ ಗೋವು ಹಟ್ಟಿಯಿಂದ ರಸ್ತೆಗೆ ಬಂದಿದೆ.

ರಾತ್ರಿ ಸಮಯದಲ್ಲಿ  ಗೋವುಗಳಿಗೆ ಕಾಲುಗಳಿಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕಾಲುಗಳನ್ನು ಹಾನಿಮಾಡಿ ಚಿಕ್ಕದಾದ  ವಾಹನಗಳಲ್ಲಿ ಚಿತ್ರ ಹಿಂಸೆ ನೀಡಿ ವಾಹನಗಳಲ್ಲಿ ಕೊಂಡು ಹೋಗುವ ಕೆಲಸ ನಡೆಯುತ್ತಿದೆ.

ಮಾಂಸಕ್ಕಾಗಿ, ಅದರ ಎಲುಬುಗಳಲ್ಲಿ ಟೂಥ್ ಪೇಸ್ಟ್,ಮಾಡಲು ಮತ್ತು ಚಾಹುಡಿ ತಯಾರಿ ಮತ್ತು ರಕ್ತದಿಂದ ಚಾಹುಡಿ ತಯಾರು ಮಾಡಲು ಉಪಯೋಗ ಮಾಡುತ್ತಿದ್ದಾರೆ.

ಜೀವಂತ ಗೋವುಗಳನ್ನು ಕೈ ಕಾಲು ಕಟ್ಟಿ ಚಿತ್ರ ಹಿಂಸೆ ನೀಡಿ ಸಾಯಿಸುತ್ತಾರೆ. ಆ ಚರ್ಮದಿಂದ ಮೂಡಿದ ಬೆಲ್ಟ್, ಪರ್ಸ್ ಮುಂತಾದ ವಸ್ತುವನ್ನು ತಯಾರಿಸಿದರೆ ದೀರ್ಘಕಾಲ ಬರುತ್ತದೆ,​ ​ನಾವು ದೇವರೆಂದು ಪೂಜಿಸುವ ಗೋವಿನ ಸ್ಥಿತಿ ಈ ರೀತಿ ಇದೆ,​ ​ಈ ರೀತಿ ತಯಾರು ಮಾಡಿದ ವಸ್ತುಗಳನ್ನು ನಾವು ಖರೀದಿ ಮಾಡಬಾರದು.

 ಆದ್ದರಿಂದ ಇನ್ನೂ ಮುಂದಿನ ದಿನಗಳಲ್ಲಿ ಇದನ್ನು ಅರಿತು ಈ ರೀತಿಯ ವಸ್ತುವನ್ನು ಖರೀದಿಮಾಡಬಾರದು, ಬದಲಾಗಿ ಗೋವು ರಕ್ಷಣೆ ಮಾಡಬೇಕಾದರೆ,​ ​ಮನೆಗೊಂದು ಗೋವು ಸಾಕಿದರೆ ಉತ್ತಮ ಸಾಧ್ಯವಾಗದಿದ್ದರೆ ಗೋವು ಸಾಕುವ ಮನೆಯವರಿಗೆ ಅಥವಾ ಗೋ ಕೇಂದ್ರಗಳಿಗೆ  ಹುಲ್ಲು ಅಥವಾ ಗೋವಿನ ಉತ್ಪನ್ನ ಪಡೆದರೆ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.
ನಮ್ಮಿಂದ ಗೋವು ಎನ್ನುವ ಬದಲು ಗೋವಿನಿಂದ ನಾವು  ಎಂಬ ಸತ್ಯ ಸಂಗತಿ ತಿಳಿದು ನಡೆದರೆ ಈ ಬದುಕು ಸಾರ್ಥಕವಾಗಲು ಸಾದ್ಯ ಎಂದರು.​​ ಚಂದ್ರಕಾಂತ್ ಸ್ವಾಗ​ತಿಸಿದರು,​ ​ಯತೀಶ್ ಧನ್ಯವಾದ​​ ಮಾಡಿದರು,​ ​ಪ್ರಸಾದ್ ಉಮೇಶ್ ​ನಿರೂಪಿಸಿದರು ​​
 
 
 
 
 
 
 
 
 

Leave a Reply