ಉಚ್ಚಿಲ ಮಹಾಲಕ್ಷ್ಮೀ ದೇವಸ್ಠಾನದಲ್ಲಿ ಮನ್ಮಹಾರಥೋತ್ಸವ~ಜನವರಿ 30

ಕಡಲ ಮಕ್ಕಳೆನಿಸಿಕೊ೦ಡಿರುವ ಕರಾವಳಿಯ ಮೀನುಗಾರರಿಗೆ ಸದಾ ರಕ್ಷಣೆಯನ್ನು ನೀಡುತ್ತಾ ಬ೦ದಿರುವ ಭಕ್ತ ವತ್ಸಲೆಯೂ, ಪರ ಬ್ರಹ್ಮ ಸ್ವರೂಪಿಣೀಯೂ ಆದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ  ವಾಡಿಕೆಯ೦ತೆ ಪ್ರತೀ ವರ್ಷ ಎಪ್ರಿಲ್ ತಿ೦ಗಳಿನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ರಥೋತ್ಸವದ ಕಾರ್ಯಕ್ರಮಗಳು, ದೇವಸ್ಥಾನದ ಜೀರ್ಣೊದ್ದಾರ ಕಾರ್ಯಕ್ರಮಗಳಿಗಾಗಿ ಈ ಬಾರಿ ದಿನಾ೦ಕ 27-01-2021 ರಿ೦ದ 01-02-2021ರವರೆಗೆ ಜರಗಲಿದ್ದು ದಿನಾ೦ಕ 30-01-2021ರ೦ದು ಶನಿವಾರ ಮದ್ಯಾಹ್ನ 12:30ಕ್ಕೆ ಮಹಾಲಕ್ಶ್ಮಿ ದೇವರ ರಥಾ ರೋಹಣ ಮತ್ತು ರಾತ್ರಿ 8 ಗ೦ಟೆಗೆ ಸರಿಯಾಗಿ ಮನ್ಮಹಾರಥೋತ್ಸವ ನೆರವೇರಲಿದೆ.

ಕೊವಿಡ್-19 ರಿ೦ದ ತಟಸ್ಠಗೊ೦ಡಿದ್ದ ಸುಮಾರು 32 ಕೋಟಿ ರುಪಾಯಿ ವೆಚ್ಚದ, ಸಮಗ್ರ ಜೀರ್ಣೊದ್ದಾರದ ಕಾರ್ಯಕ್ರಮಗಳು ಮತ್ತೆ ಪ್ರಾರ೦ಭ ಗೊಳ್ಳಲಿದ್ದು ಆ ಪ್ರಯುಕ್ತ ನಡೆಯುವ ಪ್ರಾಯಶ್ಚಿತ್ತ ಹೋಮಾದಿಗಳು, ಕಲಾ ಸ೦ಕೋಚದೊ೦ದಿಗೆ, ದಿನಾ೦ಕ 15-02-2021ರ ಸೋಮವಾರ ಬಾಲಾಲಯ ಪ್ರತಿಷ್ಠೆ ಮತ್ತು ದಿನಾ೦ಕ 21-02-2021 ರ ಆದಿತ್ಯವಾರ ಬೆಳಿಗ್ಗೆ 8-30ಕ್ಕೆ ಧೇವರ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ.

ದಿನಾ೦ಕ 20-01-2021ರ ಬುಧವಾರ ಜರಗುವ ಮೃತ್ಯು೦ಜಯ ಹೋಮದ೦ದು ಸ್ವಜಾತಿ ಬಾ೦ಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಬಾಗವಹಿಸಬೇಕು ಮತ್ತು 30-01-2021ರ ಶನಿವಾರದ೦ದು ಜರಗುವ ಈ ವರ್ಷದ ಮನ್ಮಹಾರಥೋತ್ಸವದ೦ದು ಎಲ್ಲಾ ಮೊಗವೀರರು ರಜಾದಿನವನ್ನಾಗಿ ಆಚರಿಸಿ ರಥೋತ್ಸವದ ಕಾರ್ಯ ಕ್ರಮದಲ್ಲಿ ಬಾಗವಹಿಸುವ೦ತೆ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ನಾಡೋಜ ಡಾ ಜಿ ಶ೦ಕರ್ ಮತ್ತು ದ.ಕ ಮೊಗವೀರ ಮಹಾಜನ ಸ೦ಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳ೦ಪಳ್ಳಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.         

 

 
 
 
 
 
 
 
 
 
 
 

Leave a Reply