ತುಶಿಮಾಮ ವತಿಯಿಂದ ಸಾಧಕರಿಗೆ ಸನ್ಮಾನ 

ಒಂದು ಹೂವಿನ ಸುಗಂಧ ತನ್ನ ಸುತ್ತಮುತ್ತಲಿನ ಪರಿಸರಕ್ಕೆ ಹರಡಿ, ಹೇಗೆ ಅದನ್ನು ಎಲ್ಲೆಡೆ ಪರಿಚಯಿಸುತ್ತದೋ ಅದೇ ರೀತಿ ಒಬ್ಬರ ವ್ಯಕ್ತಿತ್ವ ಕೂಡಾ ಅವರನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಸಂಚಾಲಕ ವಾಸುದೇವ ಅಡೂರು ಹೇಳಿದರು. ಅವರು ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಲ ಉಡುಪಿ ವತಿಯಿಂದ ಅಂಬಲಪಾಡಿಯಲ್ಲಿ ಜರಗಿದ ಸಾಧಕರರ ಅಭಿನಂದನಾ ಕಾರ್ಯಕ್ರಮದ ಅತಿಥಿ ಸ್ಥಾನದಲ್ಲಿ ಮಾತನಾಡುತ್ತಿದ್ದರು. ಈ ಬಾರಿಯ ಉಡುಪಿ ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಪೂರ್ಣಿಮಾ ಜನಾರ್ದನ್ ರವರನ್ನು ಸನ್ಮಾನಿಸಿ, ತಮ್ಮ ಅಪೂರ್ವ ವ್ಯಕ್ತಿತ್ವದಿಂದ ನಮ್ಮ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು. ತುಷಿಮಾಮಕ್ಕೆ ಸಂತೋಷದ ಸುದ್ದಿ:  ಮಂಗಳೂರು ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿಗಳು ವಿಶೇಷ ಆದ್ಯತೆ ನೀಡುವುದಾಗಿ ಘೋಷಿಸಿದ ಹಿನ್ನಲೆಯಲ್ಲಿ, ಸಚಿವ ಈಶ್ವರಪ್ಪನವರು ಉಡುಪಿ ಭೇಟಿ ಸಂದರ್ಭ  ಪಲಿಮಾರು ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮಲ್ಪೆಯಲ್ಲಿ ಬ್ರಹತ್ ಶ್ರೀಕೃಷ್ಣನ ಮೂರ್ತಿ ಸ್ಥಾಪನೆಗೆ ಮನವಿ ಸಲ್ಲಿಸಿದಾಗ ಸಕಾರಾತ್ಮ ಪ್ರತಿಕ್ರಿಯೆ ನೀಡಿರುತ್ತಾರೆ. 

ಇದು ವಿಶ್ವದಾದ್ಯಂತ ನೆಲೆಸಿರುವ ಶ್ರೀಕೃಷ್ಣ ಭಕ್ತರ ಮತ್ತು ಅಭಿಮಾನಿಗಳ ಮಹದಾಶಯ. ಇದು ತುಳುನಾಡ ಅಭಿವೃದ್ಧಿಯ ಒಂದು ಭಾಗವು ಹೌದು ಎಂದು ತುಷಿಮಾಮ ಅಧ್ಯಕ್ಷ ಕೆ.ಅರವಿಂದ ಆಚಾರ್ಯ ಈ ಸಂದರ್ಭದಲ್ಲಿ ಹೇಳಿದರು. 

ಕೋಶಾಧಿಕಾರಿ ಯು ವಾದಿರಾಜ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ರವಿಪ್ರಕಾಶ್ ಭಟ್ ಧನ್ಯವಾದವಿತ್ತರು. ಜಯರಾಮ ಆಚಾರ್ಯ ನಿರೂಪಿಸಿದರು

 
 
 
 
 
 
 
 
 
 
 

Leave a Reply