‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’~ತುಳು ಲಿಪಿ ಪರೀಕ್ಷೆ 

ಮಲ್ಪೆ~ ​‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’. ತುಳುವರ ಮಾತೃಭಾಷೆ ತುಳು. ಈ ಸುಂದರಭಾಷೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಮೇರು ಮಟ್ಟದ ಇತಿಹಾಸ ಇರುವ ತುಳುಭಾಷೆಗೆ ಸ್ವಂತ ಲಿಪಿ ಇದೆಎಂದು ಡಾ|ವೆಂಕಟರಾಜ ಪುಣಿಂಚಿತ್ತಾಯರು ತಮ್ಮ ಸಂಶೋಧನೆಯ ಮೂಲಕ ಜಗತ್ತಿಗೆಸಾರಿದರು.​ ಆದರೆ ಇಂದು ಹೆಚ್ಚಿನವರಿಗೆ ತುಳು ಲಿಪಿ ಇದೆ ಎಂದು ಗೊತ್ತಿದ್ದರೂ ಕಲಿಯಲು ಉದಾಸೀನ, ಭಾಷೆಯ​ ಮೇಲೆ ತಾತ್ಸಾರ. 
ಹಾಗಿರುವಾಗ ಶ್ರೀ ಕೃಷ್ಣನ ಊರು ಉಡುಪಿಯ ತುಳು ಮಹಾಕವಿ ಕೊಡವೂರಿನ ಅರುಣಾಬ್ಜರು​ ಹುಟ್ಟಿದ ಊರಿನ ಹತ್ತಿರದ ಊರಾದ ಮಲ್ಪೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಬಿಲ್ಲವ ಸೇವಾ ಸಂಘ​ ಮಲ್ಪೆ ಮತ್ತು ಜೈ ತುಳುನಾಡ್ (ರಿ) ಇವರುಗಳ ಜಂಟಿ ಆಶ್ರಯದಲ್ಲಿ ಶ್ರೀ ನಾರಾಯಣಗುರು ಸಮುದಾಯ ಭವನ​ ಮಲ್ಪೆಯಲ್ಲಿ ತುಳು ಲಿಪಿ ಕಾರ್ಯಗಾರ ಬಲುಅಚ್ಚು ಕಟ್ಟಾಗಿ ನಡೆದಿತ್ತು.ತುಳುಲಿಪಿ ಶಿಕ್ಷಕರು ಉಷಾ ಎನ್. ಪೂಜಾರಿ, ರಾಜೇಶ್ ಪೂಜಾರಿ ತುಳುವೆ,​ ಉಜ್ವಲ ಎನ್. ಪೂಜಾರಿ, ದೀಪಶ್ರೀ ಪೂಜಾರಿ, ವಿಜಯ್ ವಿಕ್ಕಿ ಪೂಜಾರಿ ಇವರುಗಳ ಉಮೇದುದಾರಿಕೆಯಲ್ಲಿ​ ತುಳುಲಿಪಿ ಕಲ್ಪಾರ್ಥಿಗಳಿಗೆ ತುಳುಲಿಪಿ ಪರೀಕ್ಷೆ ನಡೆಯಿತು.
ಉದ್ಯೋಗ ಶಿಕ್ಷಣದ ನಡುವೆ ಉಚಿತವಾಗಿತುಳುಲಿಪಿಯನ್ನು ಎಲ್ಲರಿಗೂ ಕಲಿಸುವ ಇವರುಗಳ ಕಾರ್ಯ ನಿಸ್ವಾರ್ಥ ಸೇವೆ ಮೆಚ್ಚುವಂತಹದ್ದು.​ ಉಚಿತ ತುಳುಲಿಪಿ ಕಾರ್ಯಗಾರದಲ್ಲಿ ಪಾಲು ಪಡೆದ ಕಿರಿಯರು, ಹಿರಿಯರು ಎಲ್ಲಾವಯೋಮಿತಿಯವರು ಪರೀಕ್ಷೆ ಬರೆದರು.​​
ಯಾವುದೇ ರೀತಿಯಾದ ಉತ್ತಮ ಶಿಕ್ಷಣವನ್ನು ಪಡೆಯಲು ವಯಸ್ಸು ಅಡ್ಡಿ ಬರುವುದಿಲ್ಲ ಎಂದು​ ತುಳುಲಿಪಿ ಪರೀಕ್ಷೆ ಬರೆದು ಹಿರಿಯರಾದ ಸರ್ವೋತ್ತಮ್ ಪೂಜಾರಿ ಮತ್ತು ಜಯಂತಿ ಎಂ.​ಬಂಗೇರ ಟೀಚರ್​ ಸಾಬೀತು ಪಡಿಸಿದರು.ತುಳು ಲಿಪಿ ಕಲ್ಪಾರ್ಥಿ ನಿವೇದಾ ವಿದ್ಯಾಮಾತೆ ಸರಸ್ವತಿ ಸ್ತುತಿಯನ್ನು ಪರೀಕ್ಷೆ ಪ್ರಾರಂಭವಾಗುವ ಮುನ್ನಪಠಿಸಿದರು.
 
ಮಲ್ಪೆ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ್ ದಾಸ್ ಎಂ. ಮತ್ತು ಮಲ್ಪೆ ಬಿಲ್ಲವ​ ಮಹಿಳಾ ಘಟಕದ ಅಧ್ಯಕ್ಷ ಆಶಾ ಜಗದೀಶ್ ಬಂಗೇರ, ಹರೀಶ್ ಪೂಜಾರಿ ಕೊಪ್ಪಲ್ ತೋಟ,​ ಚಂದ್ರಶೇಖರ ಪೂಜಾರಿ, ಸತೀಶ್ ಕೊಡವೂರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply