ತುಳುಲಿಪಿ ಕಲಿಕಾ ಕಾರ್ಯಗಾರ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ 

ಬಿಲ್ಲವ ಸಂಘ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜೈ ತುಳುನಾಡು (ರಿ.) ಇದರ ಒಗ್ಗೂಡಿಕೆ ಯೊಂದಿಗೆ ತಾ.25-10-2020ರಂದು ಆರಂಭವಾದ ಉಚಿತ ತುಳುಲಿಪಿ ಕಲಿಕಾ ಕಾರ್ಯಗಾರ ಇದರ ಕೊನೆಯ ಹಂತವಾಗಿ ತುಳುಲಿಪಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಭಾನುವಾರ ಮಲ್ಪೆ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಜರುಗಿತು.
ತುಳುಲಿಪಿ ಪರೀಕ್ಷೆಯಲ್ಲಿ ಕುಮಾರಿ ನಿವೇದಾ 100 ಕ್ಕೆ 100 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ,  ಹೇಮಲತಾ ಮತ್ತು ಕುಮಾರಿ ಪವಿತ್ರ 99 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಹಾಗೂ  ಆಶಾ ಜಿ. ಬಂಗೇರ,  ಜಯಂತಿ ಎಮ್, ಗೀತಾ ಬಿ,  ಉಮಾವತಿ ಮತ್ತು  ಪ್ರಶಾಂತ್ ಕುಲಾಲ್ ಈ ಐವರು 98 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನಿಗಳಾಗಿರುತ್ತಾರೆ.
ಉಚಿತ ತುಳುಲಿಪಿ ಕಲಿಕಾ ಕಾರ್ಯಾಗಾರ ಇದರ ಶಿಕ್ಷಕ-ಶಿಕ್ಷಕಿಯರಾದ ಉಷಾ ಎನ್. ಪೂಜಾರಿ, ಉಜ್ವಲ ಎನ್. ಪೂಜಾರಿ, ದೀಪಶ್ರೀ, ರಾಜೇಶ್ ತುಳುವೆ, ವಿಜಯ್ ವಿಕ್ಕಿ ಅಮೀನ್ ಇವರನ್ನು ಶಿಬಿರಾರ್ಥಿಗಳ ವತಿಯಿಂದ ಗೌರವಿಸಲಾಯಿತು.. 
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸದಸ್ಯಶ್ರೀ ಆಕಾಶ್ ರಾಜ್ ಜೈನ್, ಸಂಘದ ಅಧ್ಯಕ್ಷ  ಕೃಷ್ಣಪ್ಪ ಜತ್ತನ್, ಪ್ರಧಾನ ಕಾರ್ಯದರ್ಶಿ ಸುನಿಲ್ ದಾಸ್ ಎಂ, ಜೊತೆ ಕಾರ್ಯದರ್ಶಿ ಉಮೇಶ್ ಸುವರ್ಣ, ಶಾಲಾ ಅಧ್ಯಕ್ಷ ರಘುರಾಮ್ ಸುವರ್ಣ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ  ಆಶಾ ಜೆ.ಬಂಗೇರ, ಕಾರ್ಯದರ್ಶಿ  ಶಾಲಿನಿ,ಗೌರವ ಅಧ್ಯಕ್ಷ  ಪ್ರಭಾವತಿ ಯಾಧವ್, ಉಡುಪಿ ನಗರಸಭಾ ಸದಸ್ಯ  ಕೆ.ವಿಜಯ್ ಕೊಡವೂರು,  ಜೈ ತುಳುನಾಡು(ರಿ.) ಅಧ್ಯಕ್ಷ ಶ್ರೀ ಸುದರ್ಶನ್ ಸುರತ್ಕಲ್.
ಜೈ ತುಳುನಾಡು ಇದರ ಪ್ರ. ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಕೊಡವೂರು ಹಳೆ ವಿದ್ಯಾರ್ಥಿ ಸಂಘಅಧ್ಯಕ್ಷ ಸತೀಶ್ ಕೊಡವೂರು ಮತ್ತು ಸಂಘದ ಸಮಿತಿ ಸದಸ್ಯರು, ಬಿಲ್ಲವ ಮಹಿಳಾ ಘಟಕ, ನಾರಾಯಣ ಗುರು ಸೇವಾದಳ ಮತ್ತು ಭಜನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
 
 
 
 
 
 
 
 
 

Leave a Reply