ಮಾತ್ರ್ ಭಾಷೆಯಲ್ಲಿನ ಸಂವಹನ ಹ್ರದಯಕ್ಕೆ ತಲುಪಬಲ್ಲದು -ಡಾ.ಆಕಾಶ್ ರಾಜ್ ಜೈನ್

ನಾವು ಅನ್ಯರೊಂದಿಗೆ ಅವರಿಗೆ ಗೊತ್ತಿರುವ ಭಾಷೆಯಲ್ಲಿ ಸಂವಹನ ನಡೆಸಿದಾಗ ಅದು ಮನಸ್ಸನ್ನು ಮುಟ್ಟಿದರೆ, ನೆಲದ ಮಣ್ಣಿನ ಅಂತಸತ್ವದೊಂದಿಗೆ ಭಾವನೆಗಳಿಂದ ಮಿಳಿತವಾದ ಮಾತ್ರ್ ಭಾಷೆಯಲ್ಲಿ ಸಂವಹನ ನಡೆಸಿದರೆ ಅದು ಅವರ ಹ್ರದಯವನ್ನು ಮುಟ್ಟಬಲ್ಲದು.ಈ ನಿಟ್ಟಿನಲ್ಲಿ ತುಳುವರಾದ ನಾವೆಲ್ಲ 2500 ವರುಷಗಳ ಇತಿಹಾಸ ವುಳ್ಳ ನಮ್ಮ ಮಾತೃ ಭಾಷೆ ತುಳುವಿನ ಮೇಲೆ ಅಭಿಮಾನ,ಗೌರವ ಇಟ್ಟುಕೊಂಡು ತುಳು ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಲು ಕೈ ಜೋಡಿಸೋಣ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ಸದಸ್ಯ ಡಾ ಆಕಾಶ್ ರಾಜ್ ಜೈನ್ ಹೇಳಿದರು.

ಅವರು ಜೈ ತುಳುನಾಡು ಉಡುಪಿ ಘಟಕ, ಹಾಗೂ ಕೊಡವೂರು ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ ವತಿಯಿಂದ ಕೊಡವೂರು ವ್ಯತ್ತದಲ್ಲಿ ತುಳುಲಿಪಿಯ ನಾಮಫಲಕದ ಅನಾವರಣ ಹಾಗೂ ತುಳು ಲಿಪಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡವೂರು ವಾರ್ಡಿನ  ನಗರಸಭಾ ಸದಸ್ಯ ವಿಜಯ ಕೊಡವೂರು ರವರು ಮಾತನಾಡಿ ತುಳು ಮಹಾಭಾರತೋ ಬರೆದ ಕೊಡವೂರಿನ ಅರುಣಾಬ್ಜನ ಹೆಸರನ್ನು ಇಲ್ಲಿನ ಒಂದು ಮಾರ್ಗಕ್ಕೆ ಇಡಲು ಕಾನೂನಾತ್ಮಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.ಸ್ಥಳೀಯ ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಕೊಡವೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ರಾಜ ಎ.ಸೇರಿಗಾರ್, ಸುಧಾ ಎನ್ ಶೆಟ್ಟಿ, ಬೇಬಿ ಮೆಂಡನ್, ರಾಮ ಸೇರಿಗಾರ್ ಶ್ರೀನಿವಾಸ್ ಬಾಯರಿ, ಭಾಸ್ಕರ್ ಶೆಟ್ಟಿ, ಪ್ರಶಾಂತ್ ಜಿ ಕೊಡವೂರು, ಜೀವನ್ ಕುಮಾರ್ ಪಾಳೆಕಟ್ಟೆ, ಪ್ರವೀಣ್ ಜಿ ಕೊಡವೂರು, ಸರೋಜಿನಿ ವಿಜಯ್ ಅರುಣ್ ತುಳುವೆ, ರಾಜೇಶ್ ತುಳುವೆ ಉಪಸ್ಥಿತರಿದ್ದರು.ಜೈ ತುಳುನಾಡ್ ಸಂಘಟನೆಯ ಶರತ್ ಕೊಡವೂರು ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ ಸತೀಶ್ ಕೊಡವೂರು ಪ್ರಸ್ತಾವನೆಗೈದರು. ಉಜ್ವಲ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply