Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಪುಣ್ಯಕೋಟಿ ಗೋಸೇವಾ ಟ್ರಸ್ಟ್ ಮತ್ತು ಸ್ಥಾನಿಕ ಬ್ರಾಹ್ಮಣ ಸಂಘ ನೇತೃತ್ವದಲ್ಲಿ ಗೋಪೂಜೆ  

ಪುಣ್ಯಕೋಟಿ ಗೋಸೇವಾ ಟ್ರಸ್ಟ್ ಮತ್ತು ಸ್ಥಾನಿಕ ಬ್ರಾಹ್ಮಣ ಸಂಘ ಉಡುಪಿ ಇವರ ನೇತೃತ್ವದಲ್ಲಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಗೋಪೂಜಾ ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಭಾಗವಹಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಕಾರ್ಯಕ್ರಮ ಉದ್ಘಾಟಿ ಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಸಂಘಚಾಲಕ ರಾಮಚಂದ್ರ ಸನಿಲ್  ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕುಂಜಿಬೆಟ್ಟು ನಗರಸಭಾ ಸದಸ್ಯ ಗಿರೀಶ್ ಅಂಚನ್,  ಡಾ. ಸುದರ್ಶನ್ ರಾವ್, ಜಯರಾಮ​ ​ರಾವ್ ಉಪಸ್ಥಿತರಿದ್ದರು. ಗೋಪಾಲಕರಾದ ಶ್ರೀಮತಿ ಸಿಂಧೂ ಪೂಜಾರಿ, ಅಜಿತ್ ರಾವ್, ಮಹೇಶ್ ಪೂಜಾರಿ ವಿಷ್ಣು ಭಟ್, ಶ್ರೀಮತಿ ಕಮಲ ಇವರಿಗೆ ಸನ್ಮಾನ ಮಾಡಲಾಯಿತು.
ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಮಂಜುನಾಥ ಹೆಬ್ಬಾರ್ ಸ್ವಾಗತಿಸಿ, ಪ್ರಭಾಕರ ಬಂಡಿ ಕಾರ್ಯಕ್ರಮ ನಿರ್ವಹಿಸಿ​,​ ನಾಗಭೂಷಣರಾವ್ ಧನ್ಯವಾದವಿತ್ತರು.​​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!