Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಉತ್ತರಾಯಣದಲ್ಲಿ ಶಿರೂರು ಮಠದ ಉತ್ತರಾಧಿಕಾರಿ ನೇಮಕ: ಸೋದೆಶ್ರೀ

ಉಡುಪಿ: ಈ ಹಿಂದೆ ಶಿರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ 2018ರಲ್ಲಿ ವೃಂದಾವನಸ್ಥರಾದ ಬಳಿಕ ದ್ವಂದ್ವ ಮಠಾಧಿಪತಿಗಳ ನೆಲೆಯಲ್ಲಿ ಸೋದೆ ಶ್ರೀಗಳು ಮಠದ ಆಡಳಿತ ಉಸ್ತುವಾರಿ ವಹಿಸಿದ್ದರು.

ಆ ಹಿನ್ನೆಲೆಯಲ್ಲಿ ಅನೇಕ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲಾಗುತ್ತಿದ್ದು, ಉತ್ತರಾಯಣ ಕಾಲದಲ್ಲಿ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಲಾಗುವುದು ಎಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಿಳಿಸಿದರು.

ಉತ್ತರಾಧಿಕಾರಿಯಾಗಿಸಲು ಪ್ರಾಪ್ತ ವಯಸ್ಸಿನ ವಟುವನ್ನು ಆಯ್ಕೆ ಮಾಡಿದ್ದು, ಸದ್ಯ ಗುರುಕುಲದಲ್ಲಿ ಧಾರ್ವಿುಕ ಶಿಕ್ಷಣ ಕೊಡಿ ಮಾಡಲಾಗುತ್ತಿದೆ. ಹಿರಿಯರಾದ ಅಷ್ಟ ಮಠಾಧೀಶರ ವಿಶೇಷ ಸಹಕಾರದೊಂದಿಗೆ ಉತ್ತರಾಯಣದಲ್ಲಿ ಸನ್ಯಾಸ ದೀಕ್ಷೆ ನೀಡಲಾಗುವುದು ಎಂದು ಶ್ರೀಗಳು ಹೇಳಿದರು.

ಈಗಾಗಲೇ ಶೀರೂರು ಮೂಲ ಮಠ ಮತ್ತು ಉಡುಪಿ ಮಠದಲ್ಲಿ ಹಲವು ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ.
ಈ ಎಲ್ಲ ಕಾಮಗಾರಿ ಹಾಗೂ ಶಿರೂರು ಮಠದ ದೈನಂದಿನ ಖರ್ಚು ಮತ್ತು ಶಿರೂರು ಗೋಶಾಲೆಯ ನಿರ್ವಹಣೆಗೆ ಮಣಿಪಾಲದಲ್ಲಿರುವ ಕಟ್ಟಡದಿಂದ ಬರುವ ಬಾಡಿಗೆ ಬಳಸಲಾಗಿದ್ದು, ರಥಬೀದಿಯ ಶಿರೂರು ಮಠದ ಕಟ್ಟಡಗಳಿಂದ ಬರುವ ಬಾಡಿಗೆ ವಿನಿಯೋಗಿಸಲಾಗಿದೆ.

ಇದಕ್ಕೆ ಮಠದ ಯಾವುದೇ ಸೊತ್ತುಗಳನ್ನು ವಿಕ್ರಯಿಸಿಲ್ಲ, ಪರಭಾರೆ ಮಾಡಿಲ್ಲ ಎಂದು ಶ್ರೀಗಳು ತಿಳಿಸಿದರು. ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!