Janardhan Kodavoor/ Team KaravaliXpress
30.6 C
Udupi
Monday, January 30, 2023
Sathyanatha Stores Brahmavara

122ನೇ ಭಜನಾ ಮಂಗಲೋತ್ಸವ ಸಾಪ್ತಾಹ

 ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ, ಶ್ರೀ ದೇವರ ಸನ್ನಿಧಿಯಲ್ಲಿ ಊರ ಪರಊರ ಭಜನಾ ಮಂಡಳಿಗಳಿಂದ ಅಹೋ ರಾತ್ರಿ  7 ದಿನಗಳ ಕಾಲ  ನಿರಂತರ  ಭಜನೆ ನೆಡೆಸಿ ಮಂಗಳವಾರ 122 ನೇ  ಭಜನಾ ಸಾಪ್ತಾಹ ಮಂಗಲೋತ್ಸವ ಸಂಪನ್ನ ಗೊಂಡಿತು.
 
ಧಾರ್ಮಿಕ ಪೂಜಾ ವಿದಿ ವಿಧಾನಗಳನ್ನು  ದೇವಳದ ಅರ್ಚಕ ವಿನಾಯಕ ಭಟ್ ನಡೆಸಿಕೊಟ್ಟರು. ಭಜನಾ ಆರಾಧ್ಯ ದೇವರಾದ ಶ್ರೀ ವಿಠೋಬಾ ರುಖುಮಾಯಿ ದೇವರ ಸನ್ನಿಧಿಯಲ್ಲಿ ಜೈ ವಿಠಲ್ ಹರಿ ವಿಠಲ್ ನಾಮ ಪಠಿಸುತ್ತಾ  ದೀಪ ಸ್ತಂಭಕ್ಕೆ  ಪ್ರದಕ್ಷಣೆಗೈದರು.
ಶ್ರೀ ದೇವರಿಗೆ ಮಹಾ ಮಂಗಳಾರತಿ ಬೆಳಗಿದ ಬಳಿಕ  ಶ್ರೀ ದೇವರ ಜೊತೆ ದೀಪವನ್ನು ದೇವಳದ ಮುಂಭಾಗ ದಲ್ಲಿರಿಸಿ  ನೂರಾರು ಭಕ್ತರೂ ಭಕ್ತಿಯಿಂದ ಉರುಳು ಸೇವೆ ಹಾಕಿ ದೇವರ ಪ್ರಸಾದ ಪಡೆದು ಧನ್ಯರಾದರು. 
 
ತೆಪ್ಪಂಗಾಯಿ, ಮಾಸರು ಕುಡಿಕೆ, ನೆಡೆಸಿ ಬಳಿಕ ದೇವಳದ ಹೊರಾಂಗಣ ದಲ್ಲಿ ಶ್ರೀ ದೇವರ ಉತ್ಸವ ನೆಡೆಸಿ ದೇವಳದ ಒಳಾಂಗಣದಲ್ಲಿ ಭಕ್ತಿಯಿಂದ ಉರುಳು ಸೇವೆ ಹಾಕಿದರು. ಮಹಾ ಪೂಜೆ ನಂತರ ಸಮಾರಾಧನೆ ಯಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವಕರಿಸಿದರು. ರಾತ್ರಿ ಮರು ಭಜನೆ ನೆಡೆಸಿ ಭಜನಾ ಮಂಗಲೋತ್ಸವ ಸಂಪನ್ನ ಗೊಂಡಿತು.                                                                                                            
ಶಾಸಕ ರಘುಪತಿ ಭಟ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ರಾಘವೇಂದ್ರ ಕಿಣೆ, ಗಿರೀಶ್ ಅಂಚನ್, ಶಿವ ಕುಮಾರ್, ಭೇಟಿ ನೀಡಿದರು. ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ವಿಶೇಷ ಅಲಂಕಾರ ಹಾಗೂ ದೇವಾಲಯಕ್ಕೆ ವಿಶೇಷ ಹೂಗಳಿಂದ ಅಲಂಕಾರ  ಮಾಡಲಾಗಿತ್ತು. 
 
ಅರ್ಚಕರಾದ  ದಯಾಘನ್ ಭಟ್, ಗಿರೀಶ್ ಭಟ್, ದೀಪಕ್ ಭಟ್, ದೇವಳದಆಡಳಿತ ಮೊಕ್ತೇಸರ ಪಿ ವಿ ಶೆಣೈ, ವಿಶ್ವನಾಥ್ ಭಟ್, ನಾರಾಯಣ ಪ್ರಭು ,ಅಶೋಕ್ ಬಾಳಿಗಾ, ವಸಂತ ಕಿಣೆ, ರೋಹಿತಾಕ್ಷ ಪಡಿಯಾರ್, ಪುಂಡಲೀಕ ಕಾಮತ್, ಗಣೇಶ ಕಿಣಿ, ವಿವೇಕ ಶಾನ್ ಬೋಗ್, ಸತೀಶ್ ಕಿಣಿ, ಭಾಸ್ಕರ ಶೆಣೈ, ಆಡಳಿತ ಮಂಡಳಿಯ ಸದಸ್ಯರು ಹಾಗು ಜಿ.ಸ್.ಬಿ.ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ನೂರಾರು ಸಮಾಜ ಬಾಂಧವರು  ಉಪಸ್ಥಿತರಿದ್ದರು. 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!