ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ​ಯಾಗಿ ​ಅನಿರುದ್ದ ಸರಳತ್ತಾಯ​ ​ಆಯ್ಕೆ

ಉಡುಪಿ: 16ವರ್ಷ ವಯಸ್ಸಿನ ಅನಿರುದ್ದ ​ಸರಳತ್ತಾಯ​ ​ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ​ಶ್ರೀಶ್ರೀ  ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.ಅವರು ಮಂಗಳವಾರ ಹಿರಿಯಡ್ಕ ಬಳಿಯ ಶಿರೂರು ಮೂಲ ಮಠದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕಕ್ಕೆ ಸಂಬಂಧಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಿರಸಿ ಬಳಿಯ ಸೋಂದಾದಲ್ಲಿ ಮೇ 11 ರಂದು ಆರಂಭಗೊಳ್ಳಲಿದ್ದು, ಮೇ13 ರಂದು ​ಸನ್ಯಾಸ ​ದೀಕ್ಷೆ, ಪಟ್ಟಾಭಿಷೇಕ ನಡೆಯಲಿದೆ​ ​ಎಂದು ತಿಳಿಸಿದರು.
ವಟುವಿನ ಹಿನ್ನಲೆ, ಗುಣ, ಜ್ಞಾನ, ಆಸಕ್ತಿ ಹಾಗೂ ಜಾತಕ​ ​ಎಲ್ಲವನ್ನೂ ಪ್ರತ್ಯಕ್ಷ​ ಹಾಗು ​ಪರೋಕ್ಷವಾಗಿ ಪರಿಶೀಲನೆ ಮಾಡಿದಾಗ ಎಲ್ಲಾ ಪರೀಕ್ಷೆಯಲ್ಲಿ ಅನಿರುದ್ದನು ಸಮಂಜಸವಾಗಿ ಕಂಡು​ ​ಬಂದಿದ್ದು ಶೀರೂರು ಮಠದ ಪೀಠಾಧಿಪತಿ ಯಾಗಿ ಸನ್ಯಾಸ ದೀಕ್ಷೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮೂಲತಃ ಧರ್ಮಸ್ಥಳದ ಪ್ರಸ್ತುತ ಉಡುಪಿಯಲ್ಲಿ ವಾಸ್ತವ್ಯ ಹೊಂದಿರುವ ​ವಿದ್ವಾನ್ ​ಉದಯ ಸರಳತ್ತಾಯ ಮತ್ತು ವಿದ್ಯಾ ದಂಪತಿಗಳ ಪುತ್ರರಾಗಿರುವ ಅನಿರುದ್ದ ತನ್ನ ಹತ್ತನೇ ತರಗತಿಯ ವಿದ್ಯಾಭ್ಯಾಸವನ್ನು ಪೊರೈಸಿದ್ದಾರೆ.

ಅನಿರುದ್ದ ಕಿರಿಯ ವಯಸ್ಸಿನಿಂದಲೂ ದೇವರು ಹಾಗೂ ಧಾರ್ಮಿಕ ಚುಟುವಟಿಕೆಗಳಲ್ಲಿ ಆಸಕ್ತಿ ಉಳ್ಳವನಾಗಿದ್ದು ಮಠ ಸಂಪ್ರದಾಯಗಳ ಆಚರಣೆ ಹಾಗೂ ವಿಧಿ ವಿಧಾನಗಳ ಬಗ್ಗೆ ​ಹತ್ತಿರದ ​ಪರಿಯವಿದ್ದು ವೇದಾಂತ ಶಾಸ್ತ್ರಗಳ ಸಾರವನ್ನು ಅರಿಯುವ ಮನಃ ಉಳ್ಳವನಾಗಿದ್ದು ತಾನೇ ಸ್ವತಃ ಶಿರೂರು ಮಠಕ್ಕೆ ಯತಿಯಾ​ಗುವೆನೆಂದು ತನ್ನ ಅಭಿಪ್ರಾಯವನ್ನು ತನ್ನ ತಂದೆಯ ಬಳಿ ​ಹೇಳಿದ್ದಾರೆ.  

ಈ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡ ಸರಳತ್ತಾಯರು ಆತನ ಜಾತಕವನ್ನು ​ವಿಮರ್ಶಿಸಿ, ಪ್ರಶ್ನೆ​ ​ಹಾಕಿ ಚಿಂತಿಸಿದಾಗ ಆತನಿಗೆ ಪೀಠಾಧಿಪತ್ಯ ಯೋಗವಿದೆ ಎಂದು ತಿಳಿಯಿತು​.

ಮೇ.14ರಂದು ಪಟ್ಟಾಭಿಷೇಕ: ಶಿರಸಿ ಬಳಿಯಿರುವ ಸೋಂದೆ ಮೂಲ ಮಠದಲ್ಲಿ ಮೇ11ರಿಂದ 14ರವರೆಗೆ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಮೇ.13ರ ಬೆಳಗ್ಗೆ 7.30ರಿಂದ 8 ಗಂಟೆಯೊಳಗಿನ ಮುಹೂರ್ತದಲ್ಲಿ ಸನ್ಯಾಸ ಸ್ವೀಕಾರ ನಡೆಯಲಿದೆ.

ಮೇ.14ರಂದು ಮಧ್ಯಾಹ್ನ 12.35ರಿಂದ 12.50ರ ಅಭಿಜಿನ್ ಮುಹೂರ್ತ ದಲ್ಲಿ ಶೀರೂರು ಮಠದ 31ನೇ ಮಠಾಧಿಪತಿಯಾಗಿ ಪಟ್ಟಾಭಿಷೇಕ ನಡೆಯಲಿದೆ.

 
 
 
 
 
 
 
 
 
 
 

Leave a Reply