ಶಂಕರಾಚಾರ್ಯರ ತತ್ವಗಳು ಜಗತ್ತಿಗೇ ಮಾರ್ಗದರ್ಶಕ~ ಕೋಟ ಶ್ರೀನಿವಾಸ ಪೂಜಾರಿ

ಶ್ರೀ ದುರ್ಗಾದೇವಿ ಮಹಾಕಾಳೀ ದೇವಸ್ಥಾನ ( ರಿ) ಕೋಡಿ ಬೇಂಗ್ರೆ ಇಲ್ಲಿ ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ಬ್ರಹ್ಮಾವರ ತಾಲೂಕು ಇವರ ಪ್ರಾಯೋಜಕತ್ವದಲ್ಲಿ ” ಶಂಕರಜಯಂತಿ ಮಹೋತ್ಸವ”ವು ಆಯೋಜಿಸಲ್ಪಟ್ಟಿದ್ದು , ಕರ್ನಾಟಕ ಸರಕಾರದ  ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾದ  ಶ್ರೀಯುತ ಕೋಟ ಶ್ರೀನಿವಾಸ ಪೂಜಾರಿಯವರು ದೀಪ ಬೆಳಗಿಸಿ, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. 
ಶಂಕರಾಚಾರ್ಯರ ತತ್ವಾದರ್ಶಗಳು ಇಂದಿನ ಪ್ರಸ್ತುತತೆ. ಅವರ ತತ್ವಗಳು ಜಗತ್ತಿಗೇ ಮಾರ್ಗದರ್ಶಕ. ತನ್ನ ಅಗಾಧವಾದ ಸಾಧನೆಯಿಂದ ಅಮರರಾಗಿರುವ ಶಂಕರಾಚಾರ್ಯರ ಬದುಕಿನ ಅಧ್ಯಯನದಿಂದ ಹಿಂದೂ ಧರ್ಮದ ಉದ್ಧಾರ ಸಾಧ್ಯ. ಇಂದು ಜಾಗೃತಗೊಂಡ ಹಿಂದೂ ಧರ್ಮವು ಶಂಕರಾಚಾರ್ಯರ ಧ್ಯೇಯಗಳನ್ನು ಅಳವಡಿಸಿಕೊಂಡು ಮುಂದುವರಿಯಲಿ ಎಂದರು. 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ. ರವೀಂದ್ರ ಹೆಬ್ಬಾರ್, ಸಂಚಾಲಕರು ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ವಹಿಸಿದ್ದು, ಶ್ರೀ ಅರವಿಂದ ಶರ್ಮ ಇವರು ಶಂಕರಾಚಾರ್ಯರ ತತ್ವಾದರ್ಶಗಳು ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಸಮಿತಿ ಬ್ರಹ್ಮಾವರ ತಾಲೂಕಿನ ಕಾರ್ಯದರ್ಶಿಯಾದ ಶ್ರೀಮತಿ ಸವಿತಾ ಎರ್ಮಾಳ್ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. 
ಈ ಸಂದರ್ಭದಲ್ಲಿ ಬ್ರಹ್ಮಾವರದ ಚಿತ್ತರಂಜನ್ ಹೆಗ್ಡೆ, ಕುಮಾರಸ್ವಾಮಿ ಬಿ.ಆರ್ ಬಾರ್ಕೂರು, ನೀಲಕಂಠ ರಾವ್ ಹವರಾಲು, ಸ್ಪೂರ್ತಿ ತಂತ್ರಾಡಿ, ಮಾದವ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply