ಗೋಮಯ ಜ್ಯೋತಿ ಎಂಬ ಸಾವಯವ ದೀಪದ ಯೋಜನೆ

ಈ ಬಾರಿಯ ದೀಪಾವಳಿಯ ಜ್ಯೋತಿ ಕೇವಲ ನಿಮ್ಮ ಮನೆಯನ್ನು ಮಾತ್ರವಲ್ಲ ರಾಷ್ಟ್ರದ ಸ್ವದೇಶಿ ಕಲ್ಪನೆ ಬೆಳಗಲಿ ಎಂಬ ಉದ್ದೇಶ ದಿಂದ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಈ ಬಾರಿ ಗೋಮಯ ಜ್ಯೋತಿ​ ​ಎಂಬ ಸಾವಯವ ದೀಪದ ಯೋಜನೆಯನ್ನು ಜಾರಿಗೆ ತಂದಿದೆ.

ಪುಣ್ಯಕೋಟಿ ಗೋಸೇವಾ ಟ್ರಸ್ಟ್ (ರಿ )ಆರೂರು, ಮತ್ತು ಜಾರ್ಖಂಡಿನ ಟೀಮ್ ಗೌಮಾ ಇವರಲ್ಲಿ ತಯಾರಿಸಿದ 75 ಶೇಕಡಾ ಗೋಮಯ 25 ಶೇಕಡ ಮಣ್ಣು ಮಿಶ್ರಿತ ದೀಪವನ್ನು ತಯಾರು ಮಾಡಲಾಗುತ್ತಿದೆ. ಈ ದೀಪದ ವಿಶೇಷತೆ ಏನೆಂದರೆ ದೀಪವು ನೀರಿನಲ್ಲಿ ತೇಲುತ್ತದೆ.​ ​ತದನಂತರ ಇದನ್ನು ಗಿಡ-ಮರಗಳಿಗೆ ಗೊಬ್ಬರವಾಗಿಯೂ ಬಳಸಬಹುದು. 
 
ಈ ದೀಪವನ್ನು ವ್ಯವಹಾರದ ದೃಷ್ಟಿಯಿಂದ ಮಾಡುತ್ತಿಲ್ಲ. ಬದಲಾಗಿ ಗೋಸೇವಾ ದೃಷ್ಟಿ ಮತ್ತು ಸ್ವದೇಶಿ ಕಲ್ಪನೆಯ ಅಂಗವಾಗಿ ಪರಿಸರ ಪೂರಕ ನಡೆಸಲಾಗುತ್ತಿದೆ. ಒಂದು ಪ್ಯಾಕೆಟ್ ಬೆಲೆ 50.00 (ಐವತ್ತು ರೂಪಾಯಿ) ಇದರಲ್ಲಿ 12 ದೀಪವು ಇರಲಿದೆ .ಈ ದೀಪವು ಬೇಕಾದಲ್ಲಿ ಈ ನಂಬರನ್ನು ಸಂಪರ್ಕಿಸಿ*9008190489.
 ಈ ದೀಪವು ಸಂತೋಷ್ ಟ್ರೇಡರ್ಸ್ ಕಡಿಯಾಳಿ, ತೇಜಸ್ ಜನರಲ್ ಸ್ಟೋರ್ ಕಲ್ಸಂಕ, ಪೈಂಟ್ ಡಿಸ್ಟ್ರಿಬ್ಯೂಟರ್ ಮೆಸ್ಕಾಂ ಎದುರು ಉಡುಪಿ, ದುರ್ಗಾ ಜನರಲ್ ಸ್ಟೋರ್ ಪರ್ಕಳ, ಉಡುಪಿ ನಗರದ ಕಲ್ಸಂಕ ,ಎಂಜಿಎಂ, ಮಣಿಪಾಲ, ಈಶ್ವರನಗರ, ಎಲ್ ವಿ ಟಿ, ಬ್ರಹ್ಮಾವರದ ತಾತ್ಕಾಲಿಕ ಪಟಾಕಿ ಅಂಗಡಿಗಳಲ್ಲಿ ದೊರೆಯುತ್ತದೆ​ ಎಂದು ​ಗಣೇಶೋತ್ಸವ ಸಮಿತಿ​ ​ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ​
 
 
 
 
 
 
 
 
 
 
 

Leave a Reply