ಸಾಧಕದ್ವಯರಿಗೆ ನುಡಿನಮನ

 ಉಡುಪಿಯ ಸಾಂಸ್ಕೃತಿಕ ಚೇತನ, ರಂಗಕರ್ಮಿ, ಸಾಹಿತಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಮತ್ತು ಶಿಕ್ಷಣತಜ್ಞ ಸಾಮಾಜಿಕ ಹೋರಾಟಗಾರ ಬಳಕೆದಾರ ವೇದಿಕೆಯ ಮುಂಚೂಣಿಯ ಮುಂದಾಳು ಕೆ. ದಾಮೋದರ ಐತಾಳ್ ಈ ಈರ್ವರು ಮಹಾಚೇತನಕ್ಕೆ ನುಡಿನಮನ ಕಾರ್ಯಕ್ರಮ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ಸಂಪನ್ನಗೊಂಡಿತು . 
ಉಡುಪಿಯ ಯಕ್ಷಗಾನ ಕಲಾರಂಗ ಉಳಿದ ಸಾಂಸ್ಕೃತಿಕ ಸಂಘಟನೆಗಳೊಂದಿಗೆ  ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಈ ಇಬ್ಬರು ಸಾಧಕರ ಕುರಿತು ಒಡನಾಡಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರೊ. ರಾಮದಾಸ್, ಎ.ಪಿ ಕೊಡಂಚ, ಎನ್. ಬಿ. ದೀಕ್ಷಿತ್, ಡಾ. ಮಾಧವಿ ಭಂಡಾರಿ, ಪ್ರೊ. ಎಂ.ಎಲ್ ಸಾಮಗ, ಗುರುರಾಜ ಮಾರ್ಪಳ್ಳಿ, ಎಸ್. ವಿ ಭಟ್, ನಂದಕುಮಾರ್, ಪ್ರೊ. ಕೆ. ಸದಾಶಿವ ರಾವ್, ಡಾ. ಅನ್ನಪೂರ್ಣ ಆಚಾರ್ಯ, ಶ್ರೀಮತಿ ಸುಶೀಲ ರಾವ್, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕುರಿತು ನುಡಿನಮನ ಸಲ್ಲಿಸಿದರು. 
ಆರಂಭದಲ್ಲಿ ಕೆ.ಜೆ ಗಣೇಶ್, ಗುರುರಾಜ ಮಾರ್ಪಳ್ಳೀ, ಶ್ರೀಮತಿ ವಾರಿಜಾಕ್ಷಿ ಆರ್.ಎಲ್ ಭಟ್ ಮಾಧವಾಚಾರ್ಯರ ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಕೆ.ಜೆ ಸುಧೀಂದ್ರ ಮದ್ದಲೆಯಲ್ಲಿ ಸಹಕರಿಸಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಿರಿಯರೊಂದಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.  
 
 
 
 
 
 
 
 
 
 
 

Leave a Reply