ಪುಟ್ಟ ರೇಯಾಂಶ್ ನ ಭಕ್ತಿ ಸ್ತೋತ್ರಕ್ಕೆ ಮನಸೋತ ಮುಖ್ಯಮಂತ್ರಿ..

ಸಾಧಾರಣವಾಗಿ ಸಭೆ ಸಮಾರಂಭಗಳಲ್ಲಿ ಮೃದು‌ಮಧುರ , ಲಯ ಬದ್ಧ, ಪ್ರಾರ್ಥನಾ ಗೀತೆಗಳನ್ನು ಹಾಡಿ ಸಭಾ ಕಾಯಕ್ರಮ ಆರಂಭಿಸುವುದೊಂದು ಭಾರತೀಯ ಸಂಸ್ಕ್ರತಿ. ಕರಂಬಳ್ಳಿ ಶ್ರೀ ವೆಂಕಟರಮಣ ದೇವಳದ ಬ್ರಹ್ಮ ಕಲಶೋತ್ಸವ ಸಂಭ್ರಮವನ್ನು ಹೆಚ್ಚಿಸಲು ಮಾನ್ಯ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರು ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಸಭಾ ಕಾರ್ಯಕ್ರಮದ ಆರಂಭದಲ್ಲಿ ಶಾಸಕ ರಘುಪತಿ‌ಭಟ್ ರವರವ ಪುಟ್ಟ ಮಗ ರೇಯಾಂಶ್ ವೇದಿಕೆ ಏರಿ ತನಗೆ ತಿಳಿದ ಐದಾರು ಶ್ಲೋಕಗಳನ್ನು ತನ್ಮಯನಾಗಿ ಭಕ್ತಿ ಭಾವ ತುಂಬ ತನ್ನದೇ ಧಾಟಿಯಲ್ಲಿ ಹೇಳಲಾರಂಭಿಸಿದ.

ಕಳೆದ ವರುಷ ಹರಿಕಥೆಯ ಮೂಲಕ ಮನೆ‌ಮಾತಾಗಿದ್ದ ಈ ಪುಟ್ಟ ಬಾಲ ಇದೀಗ ತನಗೆ ಗೊತ್ತಿರುವ ಸ್ತೋತ್ರಗಳನ್ನು ಹೇಳುತ್ತಲೇ ಹೋಗುತ್ತಿರುವುದನ್ನು ಕಂಡು ಸಭಾ ವ್ಯವಸ್ಥಾಪಕರು ಮಧ್ಯೆ ನಿಲ್ಲಿಸಲು ಕೈ ಸನ್ನೆ ಮಾಡಿದರು.ಅದನ್ನು ಕಂಡ ಮುಖ್ಯ ಮಂತ್ರಿಗಳು ನಿಲ್ಲಿಸಬೇಡಿ, ಮುಂದುವರೆಸಲಿ ಮಗೂ ಎಂದು ಉತ್ತಜನ‌ ನೀಡಿದರು. ಕಡೆಗೂ ತನಗೆ ಗೊತ್ತಿರುವ ಶ್ಲೋಕಗಳನ್ನೆಲ್ಲ ಹೇಳಿ‌‌ ಮುಗಿಸಿದ. ಬಳಿಕ ಮುಖ್ಯ ಮಂತ್ರಿಗಳು ಪುಟ್ಟ ಬಾಲಕನನ್ನು ತನ್ಮ ತೊಡೆಯ ಮೇಲಿರಿಸಿ ಅಭಿನಂದಿಸಿ ಕಳುಹಿಸಿದರು.

 
 
 
 
 
 
 
 
 
 
 

Leave a Reply