ಉಡುಪಿ ಶ್ರೀ ಕೃಷ್ಣ ಮಠದಲ್ಲಿ ರಥಸಪ್ತಮಿ ಅಂಗವಾಗಿ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ರಥ ಸಪ್ತಮಿಯ ಪ್ರಯುಕ್ತ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ,ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಇದರ ಉಡುಪಿ ಜಿಲ್ಲೆಯ ನೇತ್ರಾವತಿ ವಲಯದವರು ಹಮ್ಮಿಕೊಂಡಿದ್ದ ಸಾಮೂಹಿಕ 108 ಸೂರ್ಯನಮಸ್ಕಾರ ಹಾಗೂ ಆದಿತ್ಯ ಹೃದಯ ಹೋಮ ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾಗವಹಿಸಿ ಆಶೀರ್ವಚನ ನೀಡಿದರು.

ಭೂಮಿ ದುಂಡಗಾಗಿರುವುದರಿಂದ ನಮ್ಮಲ್ಲಿ ಭೂಗೋಳ ಶಾಸ್ತ್ರ ಬಂದಿದೆ. ನಮ್ಮ ಹೊರಗಡೆಯಿರುವ ಪರಿಸರದಲ್ಲಿ ಭಗವಂತನ ರೂಪ ಚಿಂತನೆ ಮಾಡಲು, ವಸ್ತುಗಳನ್ನು ಗ್ರಹಿಸಲು ನಮ್ಮ ದೇಹದಲ್ಲಿರುವ ಇಂದ್ರಿಯಗಳು ಮುಖ್ಯ ಕಾರಣ.ಇಂದ್ರಿಯಗಳನ್ನು ಚೆನ್ನಾಗಿರಿಸುವ ಮುಖಾಂತರ ಒಳಗೆ ಸೂಪ್ತವಾಗಿರುವ ದೇವರ ಚಿಂತನೆ ಮಾಡಿ ಶರೀರವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡರೆ ಹೊರ ಪ್ರಪಂಚದ ಸುಖವನ್ನು ಅನುಭವಿಸಬಹುದು. ಗ್ರಹಗಳ ಮದ್ಯೆ ಇರುವ ಗ್ರಹ ಸೂರ್ಯ,ನಾವು ಸೂರ್ಯನ ಶಕ್ತಿಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಸಾಧನೆ ಮಾಡಬಹುದು ಎಂದರು.


ಬೆಳಿಗ್ಗೆ 5 ಗಂಟೆಯಿಂದ ಸೂರ್ಯ ನಮಸ್ಕಾರ ಹಾಗೂ ಸಮಿತಿಯ ಬಾಲಾಜಿ ರಾಘವೇಂದ್ರ ಆಚಾರ್ಯ;  ಉಪಸ್ಥಿತರಿದ್ದು ಋತ್ವಿಜರಿಂದ ಆದಿತ್ಯ ಹೃದಯ ಹೋಮ ನಡೆಯಿತು.

 
 
 
 
 
 
 
 
 
 
 

Leave a Reply