ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಇಂದು ಬಹರೈನ್ ನಲ್ಲಿರುವ ಕನ್ನಡ ಸಂಘದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕನ್ನಡ ಸಂಘ ದ ನೂತನ ಸಭಾ ಗೃಹದಲ್ಲಿ ಪೂಜ್ಯ ಶ್ರೀಪಾದರಿಂದ ವೈಭವದ ತೊಟ್ಟಿಲು ಪೂಜೆ ನಡೆಯಿತು. ಪೂಜ್ಯ ಶ್ರೀಪಾದರನ್ನು ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರು ಹಾರ , ಶಾಲು ಹೊದಿಸಿ ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಿದರು .
ಖ್ಯಾತ ಲೇಖಕರಾದ ಕಿರಣ್ ಉಪಾಧ್ಯಾಯರು ಶ್ರೀಗಳ ಸಾಧನೆ ಕುರಿತು ಪ್ರಸ್ತಾವಿಸಿ ಸ್ವಾಗತಿಸಿದರು. ಶ್ರೀರಾಮ್ ಪ್ರಸಾದ್ ರವರು ಧನ್ಯವಾದ ವಿತ್ತರು ಶ್ರೀ ರಮೇಶ್ , ಹರಿನಾರಾಯಣ , ಮೋಹನ್ ರಾವ್ , ಪ್ರಭೋದ್ ರಾವ್ ಸಂಯೋಜಿಸಿದರು. ಪೂಜ್ಯಶ್ರೀಪಾದರು ಶ್ರೀನೂರರ ನೆರೆದ ನೂರಾರು ಮಂದಿ ಭಕ್ತರಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿ ತಮ್ಮ ಪರ್ಯಾಯಕ್ಕೆ ಆಹ್ವಾನಿಸಿದರು.