Janardhan Kodavoor/ Team KaravaliXpress
26.6 C
Udupi
Tuesday, January 31, 2023
Sathyanatha Stores Brahmavara

ಉಡುಪಿ ರಥಬೀದಿಯ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೆ

ಉಡುಪಿ ರಥಬೀದಿಯ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೆಯು ನಡೆಯಿತು.  ಮುಂಜಾನೆಯಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ,ವಿಷ್ಣುಸಹಸ್ರನಾಮ ಪಾರಾಯಣ ನಡೆದವು. 
ಸಂಸ್ಕೃತ ಮಹಾಪಾಠಶಾಲೆಯ ಪ್ರಾಚಾರ್ಯರಾದ ವಿದ್ವಾನ್.ಸತ್ಯನಾರಾಯಣ ಆಚಾರ್ಯ ಹಾಗೂ  ವಿದ್ವಾಂಸರಾದ ಹೆರ್ಗ ರವೀಂದ್ರ ಭಟ್ ಗುರುಗಳ ಸಂಸ್ಮರಣೆ ಮಾಡಿದರು. ಶ್ರೀ ಮಠದ ವಿದ್ವಾಂಸರಾದ ರಾಮಚಂದ್ರ ಭಟ್ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ಶ್ರೀಪಾದರ  ಪಾದುಕೆಗೆ ಅರ್ಘ್ಯ ಪಾದ್ಯಾದಿಗಳನ್ನು ನೀಡಿ ಪುಷ್ಪಾರ್ಚನೆ ಮಾಡಿದರು.
ಕೇಂದ್ರ ಸಚಿವೆ ಶೋಭಾ ಕೇರಂದ್ಲಾಜೆ ಆಗಮಿಸಿ ನಮನವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ ಎಂ.ಬಿ. ಪುರಾಣಿಕ್, ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನದ ಧರ್ಮಧರ್ಶಿಗಳಾದ ಶ್ರೀ ರಮಣ ಉಪಾಧ್ಯಯ,ಉಡುಪಿಯ ರಾಘವೇಂದ್ರ ರಾವ್, ಯಕ್ಷಗಾನ ಕಲಾರಂಗದ ಎಸ್.ವಿ.ಭಟ್, ಶ್ರೀಮಠದ ಅಧಿಕಾರಿಗಳಾದ ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಪೆರಂಪಳ್ಳಿ, ಇಂದುಶೇಖರ್  ಮೊದಲಾದವರು ಉಪಸ್ಥಿತರಿದ್ದರು.ಆಗಮಿಸಿದ ಅಭಿಮಾನಿಗಳು,ಭಕ್ತಾದಿಗಳು ಪಾದುಕೆಗೆ ಪುಷ್ಪಾರ್ಚನೆ ಮಾಡಿ ನಮನವನ್ನು ಸಲ್ಲಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!