Janardhan Kodavoor/ Team KaravaliXpress
27.6 C
Udupi
Saturday, September 18, 2021

ಪತಂಜಲಿ ಯೋಗ ಸಮಿತಿ ಉಡುಪಿಯಲ್ಲಿ ಗುರು ವಂದನೆ


ಕಲ್ಸಂಕದ ಸುರೇಶ್ ಭಕ್ತ ಜೀ ಯವರ ಪತಂಜಲಿ ಆರೋಗ್ಯ ಚಿಕಿತ್ಸಾಲಯದಲ್ಲಿ ಗುರು ವಂದನಾ ಕಾರ್ಯಕ್ರಮ. ಸದಾನಂದ ರಾವ್ ಜೀ ಯವರಿಂದ ಅಗ್ನಿ ಹೋತ್ರ ಹವನ ಕಾರ್ಯದೊಂದಿಗೆ ಚಾಲನೆಗೊಂಡು  ಅತಿಥಿ ಉಪನ್ಯಾಸಕರಾದ ವೆಂಕಟೇಶ್ ಮೆಹೆಂದಲೇ ಜೀ ಯವರು ಗುರುವಂದನಾ ಮಹತ್ವದ ಬಗ್ಗೆ ನೆರೆದ ಯೋಗಾರ್ತಿಗಳವರನ್ನು ಉದ್ದೇಶಿಸಿ ಮಾತನಾಡಿದರು.

 

ಮೂರು ಜೆಲ್ಲೆಯ ಮಂಡಲ ಪ್ರಧಾನರಾದ ರಾಘವೇಂದ್ರ ರಾವ್ ಜೀ ಹಾಗೂ ಮಹಿಳಾ ಪ್ರಭಾರಿ  ಲೀಲಾ ಅಮೀನ್ ಜೀ ಯವರು ಶುಭಾಸನೆಗ್ಯೆದರು.  ಎಲ್ಲಾ ಯೋಗ ಪ್ರಭಾರಿಗಳು ಹಾಗೂ ಯೋಗ  ಬಂಧುಗಳೆಲ್ಲರ ಸಮ್ಮುಖದಲ್ಲಿ ಮುಖ್ಯ ಯೋಗ ಶಿಕ್ಷಕ ಶ್ರೀರಾಘವೇಂದ್ರ ರಾವ್ ರವರನ್ನು ಸನ್ಮಾನಿಸಿ, ಶ್ರೀ ವೇಂಕಟೇಶ್ ಮೆಹೆಂದಲೇ ಯವರಿಗೆ ಗೌರರ್ವಾರ್ಪಣೆ ನೀಡಲಾಯಿತು.


ಯೋಗ ಶಿಕ್ಷಕರಿಗೆ ಗುಲಾಬಿ ಹೂ ನೀಡುವುದರ ಮೂಲಕ ಅಭಿನಂದಿಸಲಾಯಿತು. ವೇದಾವತಿಯವರು ಹಾಡಿನ ಮುಖಾಂತರ ಶ್ರೀ ರಾಮ್ ದೇವ್ ಬಾಬಾ ರವರನ್ನು ಗುಣಗಾನ ಮಾಡಿದರು.  ಅಂತಿಮದಲ್ಲಿ ಯೋಗಾರ್ತಿಗಳೆಲ್ಲರೂ ಪುಷ್ಪಾಂಜಲಿಯೊಂದಿಗೆ ಗುರು ಕಾಣಿಕೆ ಸಮರ್ಪಿಸಿದರು. ಕೆ.ರಾಘವೇಂದ್ರ ಭಟ್ ರವರು ನಿರೂಪಿಸಿದರು.  ಅಜಿತ್ ಕುಮಾರ್ ಶೆಟ್ಟಿಯವರು ಧನ್ಯವಾದವಿತ್ತರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!