ಮಲ್ಪೆ ಕಡಲ ತೀರದಲ್ಲಿ ಬ್ರಹತ್ ಕೃಷ್ಣ ಮಧ್ವರ ಮೂರ್ತಿ 

ಉಡುಪಿ ಶ್ರೀ ಪಲಿಮಾರು ಮಠಕ್ಕೆ​ ​ಶ್ರೀ ಮಠದ ಅಭಿಮಾನಿಗಳು, ಧಾರ್ಮಿಕ ಚಿಂತನೆ ಮತ್ತು  ಶ್ರದ್ಧೆಯುಳ್ಳವರು, ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ,ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು  ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಪರ್ಯಾಯ ಅದಮಾರು  ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದು.800 ವರ್ಷಗಳ ಹಿಂದೆ ಆಚಾರ್ಯ ಮಧ್ವರಿಗೆ ಗೋಪಿ​ ​ಚಂದನದೊಳಗೆ ಕಡೆಗೋಲು ಕೃಷ್ಣ ಸಿಕ್ಕಿದ್ದು​,​  ಮಲ್ಪೆಯ ಕಡಲ ತೀರದಲ್ಲಿ.​ ​ಈ ದೃಷ್ಟಿಯಲ್ಲಿ  ಸರ್ಕಾರದ ವತಿಯಿಂದ  ಬೃಹತ್  ಮೂರ್ತಿ ಪ್ರತಿಷ್ಠಾಪಿಸಲು ಗುದ್ದಲಿ ಪೂಜೆ ಮಾಡಿ ಹಲವಾರು ವರ್ಷಗಳು ಕಳೆದರೂ ಯಾವುದೇ ಕಾಮಗಾರಿ ಆರಂಭವಾಗದಿರುವ  ಬಗ್ಗೆ ಸಚಿವರ ಗಮನ ಸೆಳೆದರು. ಈ  ಕಾರ್ಯದ ಬಗ್ಗೆ  ಅವಲೋಕಿಸಿ ಅದರಲ್ಲಿರುವ  ಅಡಚಣೆಗಳನ್ನು ಸರಿಪಡಿಸಿ ಮೂರ್ತಿ ಪ್ರತಿಷ್ಠಾಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.​ ​ಉಡುಪಿ ಶಾಸಕರಾದ ರಘುಪತಿ ಭಟ್ ಜೊತೆಯಲ್ಲಿದ್ದರು.​​

ಪಲಿಮಾರು ಹಿರಿಯ,​ ​ಕಿರಿಯ ಮಠಾಧೀಶರು ಸಚಿವರಿಗೆ ಶಾಲು  ಹೊದಿಸಿ ಸ್ಮರಣಿಕೆ ನೀಡಿ ಅನುಗ್ರಹಿಸಿದರು.
 
 
 
 
 
 
 
 
 
 
 

Leave a Reply