ಗೋಶಾಲೆಗಳ ನೆರವಿಗಾಗಿ 900 ಕೋಟಿ ರೂ ಯೋಜನೆ ಸಿದ್ಧ : ನಿರ್ಮಲಾ ಸೀತಾರಾಮನ್

ದೇಶದಲ್ಲಿ ಅನೇಕ ಮಠ ಸಂಸ್ಥಾನಗಳು ಸಂಘ ಸಂಸ್ಥೆಗಳು ಗೋಶಾಲೆಗಳನ್ನು ಸ್ಥಾಪಿಸಿಕೊಂಡು ಗೋರಕ್ಷಣೆಯ ಪವಿತ್ರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಂಥಹ ನೋಂದಾಯಿತ ಗೋಶಾಲೆಗಳ ನೆರವಿಗಾಗಿ 900 ಕೋಟಿ ರೂ ಗಳ ಯೋಜನೆಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ ಎಂದು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.ಮಂಗಳವಾರ ನವದೆಹಲಿಯ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಪೇಜಾವರ ಶ್ರೀ ವಿಶ್ವಸನ್ನತೀರ್ಥ ಶ್ರೀಪಾದರೊಂದಿಗೆ ನಡೆಸಿದ ಮಾತು ಕತೆಯ ವೇಳೆ ಈ ವಿಷಯವನ್ನು ಹಂಚಿಕೊಂಡರು. ಕೊರೊನಾ ದಿಂದಾಗಿ ದೇಶದ ಗೋಶಾಲೆಗಳು ಆರ್ಥಿಕ ವಿಪತ್ತನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರದಿಂದ ಕನಿಷ್ಠ 200 ಕೋಟಿ ಪರಿಹಾರ ನಿಧಿಯನ್ನು ಒದಗಿಸುವಂತೆ ಕೋರಿ ಕಳೆದ ಆಗಸ್ಟ್ ತಿಂಗಳಲ್ಲಿ ಶ್ರೀಗಳು ಸಚಿವರಿಗೆ ಪತ್ರ ಮುಖೇನ ಮನವಿ ಕಳಿಸಿದದ್ದರು .

ತಮ್ಮ ಈ ಭೇಟಿಯ ವೇಳೆ ನಿರ್ಮಲಾ ಅವರಲ್ಲಿ ಈ ವಿಷಯವನ್ನು ಶ್ರೀಗಳು ಮತ್ತೆ ಪ್ರಸ್ತಾವಿಸಿದರು. ಇದಕ್ಕುತ್ತರಿಸಿದ ನಿರ್ಮಲಾ ಈಗಾಗಲೇ ಕೇಂದ್ರವು ಈ ಬಗ್ಗೆ ವಿಶೇಷ ಗಮನಹರಿಸಿ ಹಣಕಾಸು ಇಲಾಖೆಯಿಂದ ಗೋಶಾಲೆಗಳಿಗೆ ಸಂಬಂಧಿಸಿದ ಸಚಿವಾಲಯಕ್ಕೆ 900 ಕೋಟಿ ರೂ ಹಸ್ತಾಂತರಿಸಿದ್ದು ಅಲ್ಲಿಂದ ಎಲ್ಲ ರಾಜ್ಯ ಸರಕಾರಗಳ ಮೂಲಕ ಮುಂದೆ ನೋಂದಾಯಿತ ಗೋಶಾಲೆಗಳಿಗೆ ಆದ್ಯತೆಯ ನೆಲೆಯಲ್ಲಿ ಈ ನಿಧಿಯ ವಿತರಣೆಯಾಗಲಿದೆ.

ಈ ಬಗ್ಗೆ ಸರಕಾರಗಳೊಂದಿಗೆ ಸಂವಹನ ನಡೆಸಿ ಸೂಕ್ತ ವರದಿ ಆಧರಿಸಿ ಸಚಿವಾಲಯವು ಕಾರ್ಯನಿರ್ವಹಿಸಲಿದೆ. ಪಾರದರ್ಶಕತೆಯನ್ನು ಕಾಪಾಡಲು ಇಂಥ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಇದಕ್ಕೆ ಶ್ರೀಗಳವರು ಸಂತಸ ವ್ಯಕ್ತಪಡಿಸಿದರು.

 
 
 
 
 
 
 
 
 
 
 

Leave a Reply