Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ದುರ್ಗಾ ಸುಳಾದಿ ಸ್ತೋತ್ರ ಸಹಿತವಾಗಿ ದೀಪ ಪ್ರಜ್ವಲನೆ 

01.05.202ರಂದು ಅಕ್ಷಯ ಅಮವಾಸ್ಯೆಯ ಪ್ರಯುಕ್ತ ಶ್ರೀ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಬ್ರಾಹ್ಮೀ ಮಹೂರ್ತದಲ್ಲಿ ಸಾಮೂಹಿಕವಾಗಿ ತುಪ್ಪದ ದೀಪವನ್ನು ಬೆಳಗಿ ದುರ್ಗಾ ಸುಳಾದಿ ಸ್ತೋತ್ರ ಸಹಿತವಾಗಿ ದೀಪಪ್ರಜ್ವಲನೆ ನೆರವೇರಿದೆ.
ಸಂಧ್ಯಾ ಕಾಲದಲ್ಲಿ ಲಕ್ಷ್ಮಿ ಹಾಗೂ ಕುಬೇರ ಮಂತ್ರ ಸಹಸ್ರಾರ್ಚನೆಯಲ್ಲಿ ವಿಶೇಷ ಪೂಜೆ ನೆರವೇರಲಿರುವುದು.
ಸಂಜೆ ಘಂಟೆ 5ಕ್ಕೆ ಪೂಜೆ ಆರಂಭಗೊಳ್ಳಲಿದ್ದು 7.30ಕ್ಕೆ ಪೂಜೆ ಮಂಗಳವಾಗಲಿದೆ. ಸೂಚಿಸಿದ ಸಮಯದಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥನೆಯನ್ನು ಸಲ್ಲಿಸಿ ಕೃತಾರ್ಥರಾಗಿ ಎಂದು ಕೋರಲಾಗಿದೆ.
ಪೂಜೆಯ ಮಹಾಪ್ರಸಾದವನ್ನು ತಾವು ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ನೀಡಲಾಗುವುದು ಎಂದು  ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!