ಕೃಷ್ಣ ಮಠದಲ್ಲಿ ಕನ್ನಡ ನಾಮ ಫಲಕ ಅಳವಡಿಕೆ~ಜಿಲ್ಲಾ ಕಸಾಪ ಹರ್ಷ 

ಗೋಪುರದ ಮೇಲ್ಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸಲಾಗಿದೆ. ಇದು ಅಪಾರ ಕನ್ನಡಾಭಿಮಾನಿಗಳಿಗೆ ಸಮಾಧಾನ ತಂದಿದೆ.‌  ಕೃಷ್ಣ ಮಠದಲ್ಲಿ ಕನ್ನಡ ನಾಮ ಫಲಕ ಅಳವಡಿಕೆಯಾಗಿದೆ. ಕೃಷ್ಣಮಠದ ಮುಂದಿನ ಮುಖ್ಯ ದ್ವಾರದಲ್ಲಿ ವಿಶ್ವಗುರು ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಕೃಷ್ಣಮಠ ಎಂದು ಮರದ ನಾಮಫಲಕ ಹಾಕಲಾಗಿದೆ.
ಇನ್ನು ಗೋಪುರ ದ್ವಾರದ ಮುಂಭಾಗ ಒಳಪ್ರದೇಶದಲ್ಲಿ ತುಳು ಹಾಗೂ ಸಂಸ್ಕೃತ ಲಿಪಿಯುಳ್ಳ ಬರಹ ಕೂಡಾ ರಾರಾಜಿಸುತ್ತಿದೆ. ಇದು ಅಪಾರ ಕನ್ನಡಾಭಿಮಾನಿಗಳಿಗೆ ಸಮಾಧಾನ ತಂದಿದೆ.‌ ‌ ಜೊತೆಗೆ ತುಳು ಲಿಪಿಯನ್ನ ಉಳಿಸಿ ಕೊಂಡಿರುವುದಕ್ಕೆ‌ ತುಳು ಭಾಷಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
****************
ಕನಕ ಜಯಂತಿಯ ಈ ದಿನ ಕನ್ನಡದ ನಾಮಫಲಕವನ್ನು ಹಾಕಿರುವುದು ನೋಡಿ ನಮಗೆ ತುಂಬಾ ಸಂತೋಷ ವಾಗಿದೆ. ಶ್ರೀಮಠವು ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಜನಪದಗಳ, ಸಂರಕ್ಷಣೆ ಹಾಗೂ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ.
 
ತುಳುಲಿಪಿಯನ್ನು ಹಾಕುವುದರ ಮೂಲಕ ನಮ್ಮ ಸೋದರ ಭಾಷೆಯಾದ ತುಳುವನ್ನು ಗೌರವಿಸಿರುವುದು ಕೂಡಾ ಸಂತಸದ ವಿಷಯ. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷನಾದ ನಾನು ಕನ್ನಡ ನಾಮ ಫಲಕ ಬಿಟ್ಟುಹೋದ ಬಗ್ಗೆ ಸಹಜವಾಗಿ ಆಕ್ಷೇಪ ವ್ಯಕ್ತಪಡಿಸಿದ್ದೆ. ಈಗ ಸುಲಲಿತವಾಗಿ ಸುಖಾಂತ್ಯ ಕಂಡಿದೆ.  ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಅಧ್ಯಕ್ಷನಾಗಿ ಸಮಸ್ತ ಕನ್ನಡಿಗರ ಪರವಾಗಿ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮನು ಬಳಿಗಾರ್ ಕೂಡಾ ಸಂತಸ ವ್ಯಕ್ತ ಪಡಿಸಿದ್ದಾರೆ. 
 
 ~ ನೀಲಾವರ ಸುರೇಂದ್ರ ಅಡಿಗ , ಅಧ್ಯಕ್ಷರು ಕಸಾಪ,  ಉಡುಪಿ ಜಿಲ್ಲೆ.   92421 39645
 
 
 
 
 
 
 
 
 
 
 
 

Leave a Reply