ಉಡುಪಿ: ಪ್ಲಾಸ್ಟಿಕ್ ನಿಷೇದ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್‌ನ್ನು ತೆಗೆಯಲಾಗಿದೆ. ಕನ್ನಡದಲ್ಲಿ ”ಕೃಷ್ಣ ಮಠ” ಹೆಸರಿನ ನಾಮ ಫಲಕ ಪ್ಲಾಸ್ಟಿಕ್ ಆಗಿದ್ದು, ಈಗಾಗಲೇ ತೆಗೆದು ಮೂಲ ತುಳು ಮತ್ತು ಸಂಸ್ಕೃತದಲ್ಲಿ ಮರದ ನಾಮಫಲಕ ಅಳವಡಿಸಲಾಗಿದೆ. ಒಂದೇ ಫಲಕದಲ್ಲಿ ಕನ್ನಡ ತುಳು ಮತ್ತು ಸಂಸ್ಕೃತದ ಫಲಕ ಅಂದ ಹಾಳುಮಾಡುತ್ತದೆ.
ಈ ಹಿನ್ನಲೆಯಲ್ಲಿ ತುಳು ಮತ್ತು ಸಂಸ್ಕೃತ ಫಲಕ ಮೊದಲು ಅಳವಡಿಸಲಾಗಿದೆ. ಲಕ್ಷದೀಪೋತ್ಸವ ಹಿನ್ನಲೆಯಲ್ಲಿ ಕನ್ನಡ ಫಲಕ ಅಳವಡಿಕೆ ವಿಳಂಭವಾಗಿದೆ. ಈಗಾಗಲೇ ಕನ್ನಡ ಭಾಷೆಯ ಮರದ ನಾಮಫಲಕ ಕೆತ್ತನೆ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ.
ಕೆಲವೇ ದಿನದಲ್ಲೇ ಮಠದ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸಲಾಗುವುದು ಎಂದು ಕೃಷ್ಣ ಮಠದ ಕಲೆ ಸಂಸ್ಕೃತಿ ಸಲಹೆಗಾರ ಪುರುಷೋತ್ತಮ ಅಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.