ಕೋಟೇಶ್ವರದಲ್ಲಿ ತಯಾರಾಗಲಿದೆ ಅಯೋಧ್ಯಾ ರಾಮನಿಗೊಂದು ತೇರು

ಕುಂದಾಪುರ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ. ​ರಾಮನ ಉತ್ಸವಕೊಂದು ರಥ ಬೇಡವೇ. ಉಡುಪಿ ಜಿಲ್ಲೆಯ ಕೋಟೇಶ್ವರದ ಶಿಲ್ಪಿಗಳಿಂದಲೇ ರಾಮರಥ ನಿರ್ಮಾಣಗೊಳ್ಳಲಿದೆ.
​​
ರಥ​ ​ನಿರ್ಮಾಣಕ್ಕೆ ಕೋಟೇಶ್ವರದ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು ಬಹು ಪ್ರಖ್ಯಾತಿ. ಕೋಟೇಶ್ವರದಲ್ಲಿ 1960ರಲ್ಲಿ ಆರಂಭಗೊಂಡಿರುವ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಲಕ್ಷ್ಮೀನಾರಾಯಣ ಆಚಾರ್ಯ, ಸಹೋದರ ಶಂಕರ ಆಚಾರ್ಯ ಮತ್ತು ಪುತ್ರ ರಾಜಗೋಪಾಲ ಆಚಾರ್ಯ ಅವರ​ದ್ದೇ ​ ನೇತೃತ್ವ​. 
 

ಈ ​ತಂಡ ಈಗಾಗಲೇ ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಸಹಿತ ವಿವಿಧ ದೇವಾಲಯಗಳಿಗೆ ಚಿನ್ನ, ಬೆಳ್ಳಿ ಮತ್ತು ಮರ​ದ 127 ರಥಗಳನ್ನು ನಿರ್ಮಿಸಿಕೊಟ್ಟ ಅನುಭವ​ ​ಹೊಂದಿದ್ದಾರೆ. 27ಕ್ಕೂ ಅಧಿಕ ಬ್ರಹ್ಮರಥ, 1 ಇಂದ್ರರಥ, 1 ಚಂದ್ರರಥ, 2 ಚಿನ್ನದ ರಥ, 8 ಬೆಳ್ಳಿಯ ರಥ, 63 ಪುಷ್ಪ​ ​ರಥವನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ​ಇದರೊಂದಿಗೆ ರಥ ನಿರ್ಮಾಣದ ಸಾಧನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ಇದೀಗ ಅಯೋಧ್ಯೆಯ ರಾಮನ ರಥವೂ ಕೂಡ ಕೋಟೇಶ್ವರದ ಶಿಲ್ಪಿಗಳಿಂದಲೇ ನಿರ್ಮಾಣವಾಗಲಿದೆ. ಸ್ವರಾಜ್ಯ ಅಂಕಣಕಾರ್ತಿ ಶಿಫಾಲಿ ವೈದ್ಯ ಅವರು ಪುರಾತನ ದೇವಸ್ಥಾನಗಳ ರಥಶಿಲ್ಪ ವಿಧಾನ ವೀಕ್ಷಿಸಲು ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದರು. 

ಅಲ್ಲದೇ ತಮ್ಮ ಟ್ವೀಟರ್ ನಲ್ಲಿ ಅಯೋಧ್ಯೆಯ ರಾಮ ಮಂದಿರದ ರಥ ನಿರ್ಮಾಣದ ಜವಾಬ್ದಾರಿಯನ್ನು ಕೋಟೇಶ್ವರದ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ ವಹಿಸಲಾಗಿದೆ ಎಂದು ಬರೆದು​ ​ಕೊಂಡಿದ್ದಾರೆ. ಆದರೆ ಈ ಕುರಿತು ಅಧಿಕೃತ ಪ್ರಕಟನೆ ಪ್ರಕಟ​ಣೆ ಇನ್ನಷ್ಟೇ ​ಬರ ಬೇಕಾಗಿದೆ.  
 
 
 
 
 
 
 
 
 
 
 

Leave a Reply