Janardhan Kodavoor/ Team KaravaliXpress
31.6 C
Udupi
Tuesday, May 24, 2022
Sathyanatha Stores Brahmavara

ಕನ್ನಡ ನಾಡು ನುಡಿಗೆ ಸೇವೆ ನೀಡುತ್ತಿರುವ ಕಸಾಪ ಕೆಲಸ ಯಾರೂ ಮರೆಯುವಂತಿಲ್ಲ~ ಡಾ. ಜಗದೀಶ್ ಶೆಟ್ಟಿ

ಉಡುಪಿ :- ಕನ್ನಡ ನಾಡು ನುಡಿಗೆ ಸೇವೆ ನೀಡುತ್ತಿರುವ ಬೃಹತ್ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಕೆಲಸ ಯಾರೂ ಮರೆಯುವಂತಿಲ್ಲ ಎಂದು ಖ್ಯಾತ ಇತಿಹಾಸ ತಜ್ಞ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ|| ಜಗದೀಶ್ ಶೆಟ್ಟಿ ಹೇಳಿದರು.
ಅವರು ಕ .ಸಾ.ಪ ಸ್ಥಾಪನಾ ದಿನಾಚರಣಿ ಮತ್ತು ಯಕ್ಷ ಪ್ರೇಮಿ ನಾರಾಯಣ ಸಂಸ್ಮರಣಾಥ೯ ನೀಡುವ ದತ್ತಿ ಪುರಸ್ಕಾರ ಕಾಯ೯ಕ್ರಮದಲ್ಲಿ ಮಾತನಾಡಿದರು.
ಭಾಷೆ ಜೊತೆಗೆ ಏಕೀಕರಣಕ್ಕೆ ಒತ್ತು ನೀಡಿದ ಪರಿಣಾಮ ಇಂದು ಉತ್ತಮ ನಾಡನ್ನು ನೋಡುತ್ತಿದ್ದೆವೆ. ಸಾಹಿತ್ಯ ಸಮ್ಮೇಳನಗಳು ಈ ನಾಡಿನ ವಿವಿಧ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ತರ ಕೆಲಸ ಮಾಡುತ್ತಿವೆ ಎಂದರು.

ಈ ಸಂದಭ೯ದಲ್ಲಿ ಯಕ್ಷಗಾನ ಕೇಂದ್ರದ ಗುರುಗಳಾದ ಕೃಷ್ಣಮೂತಿ೯ ಭಟ್ ರವರಿಗೆ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಹಿರಿಯ ನಾಗರೀಕ ವೇದಿಕೆಯ ಅದ್ಯಕ್ಷ ನಿವೃತ್ತ ಬ್ಯಾಂಕ್ ಅಧಿಕಾರಿ ಸಿ.ಎಸ್ ರಾವ್ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಟಾನ ಗೌರವ ಅಧ್ಯಕ್ಷ ವಿಶ್ವನಾಥ್ ಶೆಣೈ, ಕ.ಸಾ.ಪ ಜಿಲ್ಲಾ ಗೌರವ ಕಾಯ೯ದಶಿ೯ ಸುಬ್ರಮಣ್ಯ ಶೆಟ್ಟಿಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಕ .ಸಾ.ಪ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಹೆಚ್.ಪಿ ವಹಿಸಿದ್ದರು. ಈ ಕಾಯ೯ಕ್ರಮ ಕ.ಸಾ.ಪ ಉಡುಪಿ ತಾಲೂಕು , ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಯಕ್ಷಗಾನ ಕೇಂದ್ರ ಇವರ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು

ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ಸ್ವಾಗತಿಸಿದರು. ರಾಜೇಶ್ ಬಟ್ ಪಣಿಯಾಡಿ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!