ಹಣತೆ ದೀಪದೊಂದಿಗೆ ಕಲಾತ್ಮಕ ಛಾಯಾಗ್ರಹಣ ನಡೆಸಿದ ಕರಂದಾಡಿ ಶ್ರೀಧರ್ ಶೆಟ್ಟಿಗಾರ್… 

​​ಕಾಪು ಮಜೂರು ಗ್ರಾಮದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ ರವಿವಾರ ನಡೆಯಿತು.
ದೀಪೋತ್ಸವದ ಪ್ರಯುಕ್ತ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ,ತುಳಸಿ ಪೂಜೆ, ತುಳಸಿ ಸಂಕೀರ್ತಣೆ ಹಾಗು  ಭಜನಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಈ ಹಣತೆ ಬೆಳಕಿನ ಸಂಪೂರ್ಣ ಛಾಯಾಗ್ರಹಣದ ಮೂಲಕ ಭಕ್ತರ ಕಣ್ಮನ ತಣಿಸಿದವರು ಖ್ಯಾತ ಛಾಯಾಗ್ರಾಹಕ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಇವರು.  
ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪ ಬೆಳಕಿನ ಬಗ್ಗೆಯೇ ವರ್ಣನೆ ಮಾಡಿದ್ದಾರೆ    
ನನಗೂ ಗೊತ್ತು, ಈ ಕತ್ತಲಿಗೆ

ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ​​
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನು ಬಯಕೆ​… 

ಆದರೂ ಹಣತೆ ಹಚ್ಚುತ್ತೇನೆ ನಾನೂ..
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನಿನ್ನ ಮುಖ ನಾನು ,ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ
ಹಣತೆ ಬೇಗ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ. ..  ​
​ಹೀಗೆ ತನ್ನ ಕಲಾತ್ಮಕ ಕೈಚಳಕದಿಂದ, ವಿವಿಧ ದೃಷ್ಟಿಕೋನದಲ್ಲಿ ಕ್ಯಾಮೆರಾ ಹಾಗು ಬೆಳಕಿನ ಸಂಯೋಜನೆಯಲ್ಲಿ ಆಟವಾಡುತ್ತಾ ಅದ್ಬುತ ಛಾಯಾಗ್ರಹಣ ನಡೆಸಿದವರು ಶ್ರೀಧರ್ ಶೆಟ್ಟಿಗಾರ್.
ತಾನು ಮಾತ್ರ ನೋಡುವುದಲ್ಲದೆ ಸಾರ್ವಜನಿಕರು ಇದನ್ನು ನೋಡಿ ಆನಂದಿಸಬೇಕು.
ಧಾರ್ಮಿಕತೆಗೆ ಹೆಚ್ಚು ಒತ್ತು ಕೊಡಬೇಕು ಎಂಬ  ಸಂಕಲ್ಪದಿಂದ ನಡೆಸಿದ ಛಾಯಾಗ್ರಹಣ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. 
ಟೀಮ್ ಕರಾವಳಿ ಕೂಡಾ ಛಾಯಾಗ್ರಾಹಕನ ತುಡಿತಕ್ಕೆ ನಮೋ ಎನ್ನುವೆವು.     
 ​  
 
 
 
 
 
 
 
 
 


Janardhan Kodavoor, IIPC
*Photo Journalist- Mobile – 94482 52363 , Vijayavani-ವಿಜಯವಾಣಿ -1
Prop: Pooja Eyes {Everything in photo & Videography}, Prajna Publicity {
Advertising Agencey }*
*Blog:ttp://jannukodavooru.blogspot.com
email: [email protected] , <[email protected]> *
Sanchalaka: Udupi Press Photographers Association {UPPA}*
*Media Advisor: SKPA DK.Dist & Udupi Dist, *
*”BHAMA”, Opp. Canara Bank,Kodavoor – 576 106, UDUPI, Karnataka.*
 

 
 
 
 
 
 
 
 
 
 
 

Leave a Reply