ಉಡುಪಿ ಶ್ರೀಕೃಷ್ಣ ಮಠದಲ್ಲಿ ಕನಕ ಜಯಂತಿ

ಶ್ರೀಕೃಷ್ಣ ಮಠದಲ್ಲಿ,ಕನಕ ಜಯಂತಿಯ ಪ್ರಯುಕ್ತ ರಥಬೀದಿಯಲ್ಲಿರುವ ಕನಕಗುಡಿಯಲ್ಲಿ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿ ನಂತರ ರಥಬೀದಿಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಕನಕದಾಸರು ಕೀರ್ತಿಯ ಕಡೆಗೆ ಮುಖಮಾಡದೆ ಯಶಸ್ಸನ್ನು ಗಳಿಸಿದರು.

ನಾವೂ ಕೂಡ ಅವರ ಕೀರ್ತನೆಗಳ ಅರ್ಥವನ್ನು ಗ್ರಹಿಸಿ ಬದುಕಿನಲ್ಲಿ ಭಗವಂತನನ್ನು ಕಾಣಬೇಕು ಎಂದು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರೆಲ್ಲರಿಗೂ ಅನುಗ್ರಹಿಸಿ ಆಶೀರ್ವಚನ ನೀಡಿದರು.

ಸಭೆಯಲ್ಲಿ ಆರ್.ಎಸ್.ಎಸ್ ನ ಜಿಲ್ಲಾ ಸಂಘಟಕರಾದ ನಾರಾಯಣ ಶೆಣೈ ಹಾಗೂ ಕನಕ ಸದ್ಭಾವನಾ ಜ್ಯೋತಿ ಯಾತ್ರೆಯ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಕುರುಬರ ಸಂಘದ ನಿರ್ದೇಶಕರಾದ ಬಸವರಾಜು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply