ಕಮಲಶಿಲೆಯಲ್ಲಿ ನವರಾತ್ರಿ ಉತ್ಸವ ಮುಕ್ತಾಯ.

ಕುಂದಾಪುರ: ಕುಂದಾಪುರ ಬಳಿಯ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ರಾತ್ರಿ ನಡೆದ ಮಹಾ ನವರಾತ್ರಿ ಉತ್ಸವದಲ್ಲಿ ಬೆಳ್ಳಿಯ ರಥದಲ್ಲಿ ಶ್ರೀ ದೇವಿಯ ರಥೋತ್ಸವ ನಡೆದಿದೆ.

ಅ.17 ರಿಂದ 25 ರವರೆಗೆ ನವರಾತ್ರಿಯು ಪ್ರಯುಕ್ತ ಪ್ರತಿ ದಿನ ತ್ರಿಕಾಲ ಪೂಜೆ, ನವರಾತ್ರಿ ವಿಶೇಷ, ಮಹಾಪೂಜೆ, ಸುತ್ತುಬಲಿಗಳನ್ನು ನೆರವೇರಿಸಲಾಗಿತ್ತು. ಭಾನುವಾರ ಮಧ್ಯಾಹ್ನ ಚಂಡಿಕಾ ಹೋಮ, ಅನ್ನ ಸಂತರ್ಪಣೆ, ಸಂಜೆ ರಂಗಪೂಜೆ, ರಾತ್ರಿ ರಥ ಬೀದಿ ಹಾಗೂ ರಾಜ ಬೀದಿಯಲ್ಲಿ ಬೆಳ್ಳಿ ರಥೋತ್ಸವ ನಂತರ ರಾಜಬೀದಿಯಲ್ಲಿ ಲಾಲ್ಕಿ ಉತ್ಸವ ಸಂಪನ್ನಗೊಂಡಿತು.

ಹಾಗೆ ಅ.26 ರಂದು ಕದಿರು ಮಹೂರ್ತ, ಕಣಜ ತುಂಬಿಸುವುದು, ದಶಮಿ ಪೂಜೆ, ವಿಜಯೋತ್ಸವ ಹಾಗೂ ಸಂಜೆ ದಶಮಿ ಉತ್ಸವ ನೇರ ವೇರಿತು.ಇನ್ನು ಒಂಬತ್ತು ದಿನಗಳ ಉತ್ಸವದಲ್ಲಿ ಪ್ರತಿ ದಿನ ಸಂಜೆ ವಿವಿಧ ಕಲಾ ಹಾಗೂ ಭಜನಾ ತಂಡಗಳಿಂದ ಸಾಂಸ್ಕೃತಿಕ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿಅಡಿಗ ಅವರ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಅನುವಂಶೀಕ ಆಡಳಿತ ಮೊಕ್ತೇಸರ ಶೆಟ್ಟಿಪಾಲ್‌ ಸಚ್ಚಿದಾನಂದ ಚಾತ್ರ, ಅನುವಂಶಿಕ ಟ್ರಸ್ಟಿಗಳಾದ ಬರೆಗುಂಡೆ ಶ್ರೀನಿವಾಸ ಚಾತ್ರ, ಆಜ್ರಿ ಚಂದ್ರಶೇಖ ಶೆಟ್ಟಿ, ವ್ಯವ ಸ್ಥಾಪಕ ಗುರುರಾಜ್‌ ಭಟ್‌ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅನುವಂಶೀಕ ಆಡಳಿತ ಮೊಕ್ತೇಸರ ಶೆಟ್ಟಿಪಾಲ್‌ ಸಚ್ಚಿದಾನಂದ ಚಾತ್ರ ಮಾತನಾಡಿ, ಈ ಬಾರಿಯ ನವರಾತ್ರಿಯ ಉತ್ಸವ ದೇವಳದ ಭಕ್ತರ, ಅರ್ಚಕರ, ನೌಕರರ ಹಾಗೂ ಸ್ವಯಂ ಸೇವಕರ ಸಹಕಾರದೊಂದಿಗೆ ಯಶಸ್ವಿಯಾಗಿ ನೇರವೇರಿದೆ. ಕೊರೊನಾ ಹಿನ್ನೆಲೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು.

ಮುಂದಿನ ದಿನಗಳಲ್ಲಿ ಶ್ರೀದೇವಿಯ ಆಶೀರ್ವಾದದಿಂದ ಬೆಂಗಳೂರು ಹಾಗೂ ಇತರ ಭಾಗದ ಭಕ್ತರ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗೆ ನವರಾತ್ರಿಯ 9 ದಿನಗಳ ಕಾಲ ತಮ್ಮ ಅಂತಸ್ತು, ಸಾಮಾಜಿಕ ಸ್ಥಾನ–ಮಾನಗಳನ್ನು ಮರೆತು ಅನೇಕ ಭಕ್ತರು ದೇವಿ ಸನ್ನಿಧಿಯಲ್ಲಿ ಸಕಲ ರೀತಿಯ ಸೇವೆ ಸಲ್ಲಿಸಿರುವುದು ಅಭಿನಂದನಾರ್ಹ ಎಂದಿದ್ದಾರೆ.

 
 
 
 
 
 
 
 
 
 
 

Leave a Reply