​​ ಪವಿತ್ರವಾದ  ಇಂದ್ರಾಣಿ ನದಿಯನ್ನು ನಂಬಿ ಕೃಷಿ  ಮಾಡುವ ರೈತರಿಗೆ ಈಗ ಸಾಧ್ಯವಾಗುತ್ತಿಲ್ಲ~ಕೆ.ವಿಜಯ್ ಕೊಡವೂರು

ಕೃಷಿಕರು  ದೇಶದ ಬೆನ್ನೆಲುಬು ಎಂದು ನಾವು ಭಾಷಣದಲ್ಲಿ ಹೇಳುತ್ತೇವೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಕೃಷಿಕರ ಬಗ್ಗೆ ಸರಕಾರದಿಂದ ಬರುವ ಸವಲತ್ತುಗಳ ಮಾಹಿತಿ ನೀಡದೆ ಕೃಷಿಗೆ ಪೂರಕವಾದ ವಾತಾವರಣ ನಿರ್ಮಿಸದೆ, ಕೃಷಿ  ಮಾಡಬೇಕೆಂದು ಹೇಳುತ್ತೇವೆ. ಕಣ್ಣಿಗೆ ಬಟ್ಟೆ ಕಟ್ಟಿ ಅವನು ಸರಿಯಾದ  ದಾರಿಯಲ್ಲಿ ನಡೆಯ ಬೇಕೆಂದು ಮಾರ್ಗದರ್ಶನವನ್ನು ನೀಡುತ್ತೇವೆ ಎಂದು  ನಗರ ಸಭಾ ಸದಸ್ಯ ಕೆ.ವಿಜಯ್ ಕೊಡವೂರು ಹೇಳಿದರು
ಅವರು  ಕೊಡವೂರು ವಾರ್ಡ್ ನಲ್ಲಿ ವಿಶ್ವ ಕೃಷಿಕರ ದಿನಾಚರಣೆ ನಿಮಿತ್ತ ಕೊಡವೂರು ವಾರ್ಡ್ ನಲ್ಲಿರುವ ಕೃಷಿ ಸಮಿತಿಯ ಮುಂದಾಳತ್ವದಲ್ಲಿ ಕೃಷಿಕರ ಮನೆಗೆ ಭೇಟಿ ನೀಡಿ ಗೌರವಿಸುವ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು 

ಪವಿತ್ರವಾದ  ಇಂದ್ರಾಣಿ ನದಿಯನ್ನು ನಂಬಿ ಕೃಷಿ ಮಾಡುವ ರೈತರಿಗೆ ಈಗ ಸಾಧ್ಯವಾಗುತ್ತಿಲ್ಲ ಕಾರಣ ಉಡುಪಿ ನಗರದಿಂದ  ಬರುವ ತ್ಯಾಜ್ಯ ನೀರು. ಈ ನೀರಿನಿಂದ ರೈತ ಕೃಷಿ ಮಾಡಲು ಸಾಧ್ಯವೇ. ಈ ಸಂಗತಿ ತಿಳಿದರು ನೀವು ಮತ್ತೆ ಮತ್ತೆ ಕೃಷಿ ಮಾಡಬೇಕು ಇಲ್ಲವಾದರೆ ಪಡೀಲು ಬಿದ್ದಿರುವ ನಿಮ್ಮ ಭೂಮಿಯನ್ನು ಹಿಂದೆ ಪಡೆಯುತ್ತೇವೆ ಎಂದು ಹೆದರಿಸುವ  ಮುಖಾಂತರ ದೇಶದ ಬೆನ್ನೆಲುಬಾಗಿರುವ ರೈತರನ್ನು ನಾವು ಕಡೆಗಣಿ ಸುತ್ತೇವೆ. 

ಪ್ರಧಾನಿಯವರ ಕೃಷಿ  ಮಸೂದೆಯು  ಕೃಷಿಕರಿಗೆ ಪೂರಕವಾಗಿದೆ ಆದರೆ ದಲ್ಲಾಳಿಗಳಿಗೆ ಪೂರಕವಾಗಿಲ್ಲ. ಇದನ್ನು ಕೃಷಿಕರು ಅರ್ಥ  ಮಾಡಿಕೊಳ್ಳುವ ಅವಶ್ಯಕತೆ  ಇದೆ ಎಂದರು. ಕೃಷಿಕರಾದ ಮುದ್ದು ಪೂಜಾರಿ, ಸದಾನಂದ ಶೇರಿಗಾರ್, ಅಣ್ಣಪ್ಪ ಶೆಟ್ಟಿ, ಮುದ್ದು ಪೂಜಾರಿ, ವಿಠ್ಠಲ ಶೆಟ್ಟಿ ಇವರುಗಳನ್ನು ಗೌರವಿಸಲಾಯಿತು. 
ಈ ಸಂದರ್ಭದಲ್ಲಿ ನಾರಾಯಣ  ಬಲ್ಲಾಳ್,  ಚಂದ್ರಕಾಂತ, ಮಂಜುನಾಥ್ ಗರ್ಡೆ, ವಿನಯ್ ಗರ್ಡೆ ಉಪಸ್ಥಿತ ರಿದ್ದರು. ನಗರಸಭಾ ಸದಸ್ಯ ಕೆ.ವಿಜಯ್ ಕೊಡವೂರು ಸ್ವಾಗತಿಸಿ, ಕೃಷಿ ಪ್ರಮುಖ್ ಅರುಣ್ ರಾವ್ ವಂದಿಸಿದರು.
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply