ಹೋಂ ಡಾಕ್ಟರ್ ಫೌಂಡೇಶನ್~ ಅಂಬುಲೆನ್ಸ್ ಲೋಕಾಪ೯ಣೆ

ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ವಿಶಿಷ್ಟವಾದ ರೀತಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣಿ ಮತ್ತು ನೂತನ ಅಂಬುಲೆನ್ಸ್ ಲೋಕಾಪ೯ಣೆ ಕಾಯ೯ಕ್ರಮ ಡಿ.25 ಆದಿತ್ಯವಾರ ಕನ್ನಾರು ಕಲ್ಲು ಕೋರೆ ಪರಿಸರದಲ್ಲಿ ನಡೆಯಿತು.

ಈ ಸಂದಭ೯ದಲ್ಲಿ 2 ಜನ ಬಡ ರೋಗಿಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು. ಸಂಸ್ಥೆಯ ನೂತನ ಅಂಬುಲೆನ್ಸ್‌ ಉದ್ಘಾಟಿಸಿ ಮಾತನಾಡಿದ ಅರಣ್ಯ ಇಲಾಖೆಯ ಅರುಣ್ ಜತ್ತನ್ನ , ಸಂಸ್ಥೆಯ ಮೂಲಕ ಅನೇಕ ರೀತಿಯ ಜನಪರ ಕಾಯ೯ ನಡೆಯುತ್ತಿರುವುದು ಅಭಿನಂದನೀಯ.ಬಡ ರೋಗಿಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ಸಾಗಿಸಲು ಉಚಿತವಾದ ಈ ಅಂಬುಲೆನ್ಸ್‌ ಸೇವೆ ಮಾನವೀಯತೆಯ ಮಹಾ ಕಾಯ೯ ಎಂದರು.

ಕಾಯ೯ಕ್ರಮದಲ್ಲಿ ಮಾತನಾಡಿದ ಹೋಂ ಡಾಕ್ಟರ್ ಫೌಂಡೇಶನ್ ಮುಖ್ಯಸ್ಥ ಡಾI ಶಶಿಕಿರಣ್ ಶೆಟ್ಟಿ, ಸಾವಿರಾರು ಸಹೃದಯ ದಾನಿಗಳ ಮೂಲಕ ನಮ್ಮ ಸೇವಾ ಕಾಯ೯ಗಳು ನಡೆಯುತ್ತಿವೆ. ವಿವಿಧ ಯೋಜನೆ ಗಳನ್ನು ಪ್ರಾರಂಭಿಸುವ ಮುನ್ನ ರಿಯಾಲಿಟಿ ಚೆಕ್ ಮೂಲಕ ನಮ್ಮ ಸೇವಾ ಚಟುವಟಿಕೆಗಳು ನಿರಂತರ ವಾಗಿ ನಡೆಯುತ್ತಿವೆ ಸಂಸ್ಥೆಯ14 ಕಾನ್ಸೆಪ್ಟ್ ಗಳ ಬಗ್ಗೆ ಸಭೆಗೆ ವಿವರಿಸಿದರು.

ಸ್ಥಳೀಯ ನಿವಾಸಿಗಳ ಮನೋರಂಜನಾ ಕಾಯ೯ಕ್ರಮ ಮನಸೊರಗೊಂಡಿತು.ನಿವಾಸಿಗಳಿಗೆಬಟ್ಟೆ ವಿತರಣೆ ನಡೆಸಲಾಯಿತು. ಸಂದಭ೯ದಲ್ಲಿ, ಉದ್ಯಮಿ ಜಯಕರ ಶೆಟ್ಟಿ, ಗ್ರೇಸಿ, ಡಾ. ಸುಮಾ ಎಸ್ ಶೆಟ್ಟಿ, ಪ ರಾಘವೇಂದ್ರ ಪೂಜಾರಿ, ಬoಗಾರಪ್ಪ, ಉದಯ್ ನಾಯ್ಕ್, ಸಂಸ್ಥೆಯ, ಪ್ರೀತಿ ರಾಘವೇಂದ್ರ ಪೂಜಾರಿ, ರಾಘವೇಂದ್ರ ಕರ್ವಾಲು’ದಿನಕರ್ ಶೆಟ್ಟ,ಅನುಷಾ,ಸತೀಶ್ ಆಚಾರ್ಯ ಬೆಳ್ಳಂಪಲ್ಲಿ, ಸುಂದರ್,ಶಂಕರ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು..

 
 
 
 
 
 
 
 
 

Leave a Reply