Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಯೋಧರೊಂದಿಗೆ ಪ್ರಧಾನಿ ದೀಪಾವಳಿ ಹಬ್ಬ ಆಚರಣೆ

ಪ್ರತಿ ವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ದೇಶದ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಇಂದು ಜೈಸಾಲ್ಮರ್​​ಗೆ ತೆರಳಿದ ಮೋದಿ ಅಲ್ಲಿನ ಯೋಧರಿಗೆ ದೇಶದ ಜನರ ಪರವಾಗಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದು, ಈ ವೇಳೆ ಯುದ್ಧ ಟ್ಯಾಂಕರ್​​ ಏರಿಬಂದು ಎಲ್ಲರ ಗಮನ ಸೆಳೆದರು. ಇಷ್ಟೇ ಅಲ್ಲದೆ ಆರ್ಮಿ ಉಡುಪಿನಲ್ಲಿ ಡಿಫರೆಂಟ್​ ಲುಕ್​ ನಲ್ಲಿ ಕಾಣಿಸಿಕೊಂಡಿದ್ದಾರೆ.ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ನೀವು ಹಿಮಾವೃತ ಬೆಟ್ಟಗಳಲ್ಲಿ ಇರಬಹುದು ಅಥವಾ ಮರಳುಗಾಡಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರಬಹುದು, ನಾನು ನಿಮ್ಮ ಬಳಿಗೆ ಬಂದಾಗಲೇ ದೀಪಾವಳಿ ಹಬ್ಬ ನನಗೆ ಸಂಪೂರ್ಣವಾಗುವುದು. ನಿಮ್ಮ ಮುಖದಲ್ಲಿ ಸಂತೋಷ ನೋಡಿದಾಗ ನನ್ನ ಸಂಭ್ರಮವನ್ನ
ದುಪ್ಪಟ್ಟು ಗೊಳ್ಳುತ್ತದೆ ಎಂದರು.ಭಾರತಕ್ಕೆ ಎದುರಾಗುವ ಪ್ರತಿ ಸವಾಲಿನಲ್ಲೂ ನಿಮ್ಮ ಶೌರ್ಯ ಜಯ ಸಾಧಿಸಿದೆ ಎಂದು ಯೋಧರ ಪರಾಕ್ರಮ ವನ್ನು ಶ್ಲಾಘನೆ ಮಾಡಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!