Janardhan Kodavoor/ Team KaravaliXpress
25.6 C
Udupi
Wednesday, August 17, 2022
Sathyanatha Stores Brahmavara

ಜಿಲ್ಲಾ ಮಹಿಳಾ ಮೋರ್ಚಾ ಉಡುಪಿ ಇದರ ವತಿಯಿಂದ ಕುಣಿತ ಭಜನೆ

ಜಿಲ್ಲಾ ಮಹಿಳಾ ಮೋರ್ಚಾ ಉಡುಪಿ ಇದರ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ​ ಮಂಗಳವಾರ ನವರಾತ್ರಿಯ ಪರ್ವ ಕಾಲದಲ್ಲಿ ನವ ದುರ್ಗೆಯರಿಗೆ ಪ್ರಿಯವಾದ ವಿಶೇಷ ಕುಣಿತ ಭಜನೆಯ ಉದ್ಘಾಟನೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ​ ​ಕುಯಿಲಾಡಿ ಸುರೇಶ್ ನಾಯಕ್ ರವರು ನೆರವೇರಿಸಿದರು.​  ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮೋರ್ಚಾದ ​ಅಧ್ಯಕ್ಷೆ ವೀಣಾ. ಎಸ್. ಶೆಟ್ಟಿಯವರು ವಹಿಸಿದರು.​ ​ಸಂದರ್ಭದಲ್ಲಿ ಮೂಲ್ಕಿ- ಮೂಡಬಿದ್ರೆ ಶಾಸಕರಾದ ಉಮಾ ನಾಥ ಕೋಟ್ಯಾನ್ ರವರು ಆಗಮಿಸಿ ಮಹಿಳಾ ಮೋರ್ಚಾದವರಿಗೆ ಶುಭ ಹಾರೈಸಿದರು.
​​
ವಿಭಾಗ ಸಹ ಪ್ರಭಾರಿಗಳಾದ ಗೋಪಾಲ್ ಕೃಷ್ಣ ಹೇರಳೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ​ಯಶಪಾಲ್ ಸುವರ್ಣ, ಬಿ. ರವಿ. ಅಮೀನ್, ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಕಾಪು ಮಂಡಲ​ ​ಅಧ್ಯಕ್ಷ ಶ್ರೀಕಾಂತ್ ನಾಯಕ್, ಜಿಲ್ಲಾ ಸಹ ವಕ್ತಾರ​ ​ಶಿವಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶೀಲಾ. ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ಗೀತಾಂಜಲಿ ಸುವರ್ಣ, ನಗರ ಮಹಿಳಾ ಮೋರ್ಚಾ ಅಧ್ಯಕ್ಷ​ ​ಸರೋಜಾ ಶೆಟ್ಟಿಗಾರ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ​ ​ಅಧ್ಯಕ್ಷ​ ​ದಾವೂದ್ ಅಬೂಬಕ್ಕರ್, ಕಾಪು ಮಹಿಳಾ ಮೋರ್ಚಾ ​ಅಧ್ಯಕ್ಷೆ ​ಸುಮಾ ಶೆಟ್ಟಿ, ಸುನೀತಾ ನಾಯಕ್, ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕುಣಿತ ಭಜನೆಯ ತರಬೇತಿಯನ್ನು ನಡೆಸಿ ಕೊಟ್ಟ ಅನುಸೂಯ ಯವರಿಗೆ ಮಹಿಳಾ ಮೋರ್ಚಾದಿಂದ ​ಅಭಿನಂದಿಸ ಲಾಯಿತು. ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ​ ​ಪ್ರಮೀಳಾ ಹರೀಶ್ ನಿರೂಪಿಸಿದರು. ರಶ್ಮಿತಾ ಶೆಟ್ಟಿ​ ​ಧನ್ಯವಾದ​ವಿತ್ತರು  ​​
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!