ಭಜನೆಯಿಂದ ವಿಭಜನೆ ಇಲ್ಲ – ಕೆ ವಿಜಯ್ ಕೊಡವೂರು.

ಕೊಡವೂರು ವಾರ್ಡಿನ ಶಿವಾಜಿ ನಗರದಲ್ಲಿ ಕಳೆದ 1 ವರ್ಷದಿಂದ ಶ್ರೀ ಶಂ ಕುಣಿತ ಭಜನಾ ಮಂಡಳಿ ರಚಿಸಿ ಆ ಭಾಗದ ಯುವಕ – ಯುವತಿ ಮತ್ತು ಮಕ್ಕಳಿಗೆ ಸಂಸ್ಕಾರ ಕೊಟ್ಟು ದುಶ್ಚಟ ಇಲ್ಲದ ಬಲಿಷ್ಟ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಯಿತು.

ಇದೇ ರೀತಿ ಎಲ್ಲಾ ವಠಾರದ ಯುವಕ,ಯುವತಿ,ಮಕ್ಕಳು ಹಾಗೂ ಸಂಘ ಸಂಸ್ಥೆಗಳು ಯೋಚನೆ ಮಾಡಬೇಕು. ಪ್ರತಿ ದಿನ ಮನೆ ಮನೆಯಲ್ಲಿ ಭಜನೆ ಮಾಡುವುದರಿಂದ ಮಕ್ಕಳಿಗೆ ದೇವರ ಹುಟ್ಟು, ಜೀವನ ಪದ್ಧತಿ ಮತ್ತು ದೇವರ ಜೀವನದ ಉದ್ದೇಶ ತಿಳಿದು ಧರ್ಮದ ರಕ್ಷಣೆಗಾಗಿ ದೇವರು ಹೇಳಿದ ಸಂದೇಶವನ್ನು ಜೀವನ ಪೂರ್ತಿ ಪಾಲನೆ ಮಾಡುತ್ತಾರೆ.ಕೃಷ್ಣನ ಭಜನೆ ಮಾಡುತ್ತಾ – ಮಾಡುತ್ತಾ ಧರ್ಮದ ಸಂಕಟ ಬಂದರೆ ಸುದರ್ಶನ ಚಕ್ರ ಹಿಡಿದು ಹೋರಾಟ ಮಾಡುವಂತಹ ಮಾನಸಿಕತೆ ತಯಾರಾಗುತ್ತದೆ. ಪ್ರಭು ಶ್ರೀ ರಾಮನಂತೆ ಆದರ್ಶ ಮಗನಾಗಿ,ಆದರ್ಶ ಗಂಡನಾಗಿ,ಆದರ್ಶ ರಾಜನಾಗಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ನಂತೆ ನಡವಳಿಕೆ ಬರಲು ಸಾಧ್ಯತೆಯಿದೆ.

ಇದೇ ರೀತಿ ರಾಮ ರಾಜ್ಯ ನಮ್ಮ ಊರಿನಲ್ಲಿ ಆಗಬೇಕಾದರೆ ಪ್ರತೀ ಮನೆಯಲ್ಲೂ ಭಜನೆ ಮಾಡುವಂತೆ ಪ್ರೇರೇಪಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ನಗರ ಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು ಹೇಳಿದರು. ಕುಣಿತ ಭಜನೆಯ ಮೊದಲ ಸೇವೆಯನ್ನು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗುರುಗಳಾದ ಶ್ರೀ ನಿತ್ಯಾನಂದ ಕಬ್ಯಾಡಿಯವರನ್ನು ​ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ಧನ್ ಕೊಡವೂರು ಶಾಲು ಹೊದಿಸಿ ಗೌರವಿಸಿದರು. ​ ವ್ಯವಸ್ಥಾಪನಾ ಸಮಿತಿ ಸದಸ್ಯ ಈ ಸಂದರ್ಭದಲ್ಲಿ ರಾಜೇಶ್ ಶೇರಿಗಾರ್, ಪ್ರಕಾಶ್, ರವೀಂದ್ರ, ಶ್ರೀನಿವಾಸ್, ಕೆ.ಟಿ ಪೂಜಾರಿ, ಕಾಳು ಶೇರಿಗಾರ್,ರಾಜೇಶ್ ಕಾನಂಗಿ,  ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply