ಅಯ್ಯಪ್ಪ ವೃತಾಧಾರಿಗಳ ಗಮನಕ್ಕೆ…

ಈ ಬಾರಿ ಶಬರಿಮಲೆಯಲ್ಲಿ ಕೇರಳ ಸರಕಾರ ಕೋವಿಡ್ ಮುಂಜಾಗ್ರತೆಯ ನೆಪದಲ್ಲಿ ​16 ನವಂಬರ್ ​2020 ರಿಂದ  ಅಯ್ಯಪ್ಪ ಭಕ್ತರಿಗೆ  ಕೆಲವೊಂದು ​ನಿರ್ಬಂಧನೆಯನ್ನು ಹೊರಡಿಸಲು ​ಪೂರ್ವ ತಯಾರಿ ಮಾಡಿಕೊಂಡಿದೆ.​ ​ಶಬರಿಮಲೆಗೆ ಪ್ರವೇಶಿಸಲು ದಿನ ವೊಂದಕ್ಕೆ ​1000 ಹಾಗೂ ವಿಶೇಷ ದಿನಗಳಲ್ಲಿ ​5000 ಭಕ್ತರಿಗೆ ಮಾತ್ರ ಅನುಮತಿ ಆನ್ಲೈನ್ ಮೂಲಕ ರೆಜಿಸ್ಟರ್ ಮಾಡಿಕೊಂಡ ವರಿಗೆ ಮಾತ್ರ ಅವಕಾಶ
 
​ವರ್ಚುಯಲ್ ಕ್ಯೂನಲ್ಲಿ ನೊಂದಾಯಿಸಿಕೊಳ್ಳಲು ಕೋವಿಡ್ ನೆಗೆಟಿವ್ ​ಸರ್ಟಿಫಿಕೇಟನ್ನು ಕಡ್ಡಾಯವಾಗಿ ಹೊಂದಿರಬೇಕು. ​ದರ್ಶನದ ದಿನದಂದು ಕೋವಿಡ್ ನೆಗೆಟಿವ್ ಎಂದು ದ್ರಢಪಡಿಸಿಕೊಂಡು​,​ ತದ ನಂತರವಷ್ಟೇ ​ದರ್ಶನಕ್ಕೆ ಅವಕಾಶ​. ​ ​10ರಿಂದ ​60 ವರ್ಷದ ಒಳಗಿನ ವೃತಾಧಾರಿಗಳಿಗೆ ಮಾತ್ರ ಅನುಮತಿ​. ​ ಅಂದರೆ ​60ಕ್ಕೆ ಮೇಲ್ಪಟ್ಟ ಹಿರಿಯ ಗುರುಸ್ವಾಮಿಗಳಿಗೆ ಅವಕಾಶ ವಿರುವುದಿಲ್ಲ. ಪಂಬಾ ನದಿಯಲ್ಲಿ ಸ್ನಾನ ಮಾಡುವಂತಿಲ್ಲ​. ​
ಎಂದಿನಂತೆ ಒಟ್ಟಾಗಿ  ಶರಣ​ ​ಘೋಷಗಳನ್ನು ಮಾಡುವಂತಿಲ್ಲ. ​18 ಮೆಟ್ಟಿಲುಗಳೇರಿ ಸನ್ನಿಧಾನಕ್ಕೆ ಹೋಗುವಂತಿಲ್ಲ. ತುಪ್ಪಾಭಿಷೇಕ ನಿಷೇಧಿಸಲಾಗಿದೆ. ಸರಕಾರಿ ವಾಹನದ ವ್ಯವಸ್ಥೆಯ ಸಾಧ್ಯತೆ ಕಡಿಮೆ​.​ ವಿಶೇಷ ಸೇವೆಗಳು ಯಾವುದೂ ಇರುವುದಿಲ್ಲ. ಮುಖ್ಯವಾಗಿ ಯಾವುದೇ ರೀತಿಯ ಪ್ರಸಾದ ವಿತರಣೆ, ಊಟದ ಹಾಗೂ ನೀರಿನ ವ್ಯವಸ್ಥೆ ಇರುವುದಿಲ್ಲ​. ​ ವಿಶ್ರಾಂತಿಗಾಗಿ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಅವಕಾಶಗಳಿಲ್ಲ. ಕೋವಿಡ್ ಸಾಂಕ್ರಾಮಿಕ ಕಾಯಿಲೆಯು ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿರುವುದರಿಂದ ಅಕ್ಟೋಬರ್ ​31ರ ತನಕ ಕೇರಳದಾದ್ಯಂತ  ​5 ಕ್ಕಿಂತ ಹೆಚ್ಚಿನ ಜನರು ಒಂದು ಕಡೆ ಸೇರುವುದನ್ನು ನಿಷೇಧಿಸಲಾಗಿದೆ.
(ಹೆಚ್ಚಿನ ದಿನಗಳಿಗೆ ವಿಸ್ತರಿಸಬಹುದು). ನೀಲಕ್ಕಲ್ ನಲ್ಲಿ ಕೋವಿಡ್ ಪಾಸಿಟಿವ್ ಬಂದ  ಭಕ್ತಾದಿಗಳಿಗೆ ಕೇರಳ ಸರಕಾರ ಅಥವಾ ದೇವಾಸ್ವಮ್  ​ಬೋರ್ಡ್ ಯಾವುದೇ ​ಪ​ರ‍್ಯಾಯ  ವ್ಯವಸ್ಥೆಯ ಬಗ್ಗೆ ಈ ವರೆಗೆ ಹೇಳಿಕೆಯನ್ನು ನೀಡಿರುವುದಿಲ್ಲ. ಒಟ್ಟಾರೆಯಾಗಿ ಈ ಬಾರಿ ಶಬರಿಮಲೆಗೆ ಹೋಗುವ ಭಕ್ತರಿಗೆ ಅಲ್ಲಿ ಹೆಚ್ಚಿನ ಎಲ್ಲಾ  ಶ್ರದ್ದೆ, ಭಕ್ತಿ, ಆಚರಣೆಗಳನ್ನು ನಿಷೇಧಿಸಲಾಗಿದೆ.

ಆದುದರಿಂದ ಅಯ್ಯಪ್ಪ ವೃತಾಧಾರಿಗಳು ​41 ದಿನಗಳಕಾಲ ವೃತವನ್ನು ಪಾಲಿಸಿ ತಮಗೆ ಅನುಕೂಲವಾಗುವ ಅಯ್ಯಪ್ಪ ದೇವಸ್ಥಾನ ಗಳಲ್ಲಿ ಕೋವಿಡ್ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಿ  ತಮ್ಮ ಪೂಜಾ ವಿದಿವಿಧಾನವನ್ನು ಮಾಡಿ ಶ್ರೀ ದೇವರಲ್ಲಿ ಕೋವಿಡ್ ಸಾಂಕ್ರಾ ಮಿಕ ​ಖಾಯಿಲೆಗೆ ಶಾಶ್ವತ ಪರಿಹಾರಕ್ಕಾಗಿ ​ಪ್ರಾರ್ಥಿಸುವುದರೊಂದಿಗೆ  ಮುಂದಿನ ​ವರ್ಷಕ್ಕೆ  ತಮ್ಮ ಶಬರಿಮಲೆ ಯಾತ್ರೆಯನ್ನು ಮುಂದೂಡಿದರೆ ಉತ್ತಮ. 

ವಿ ಸೂ :ದಿನಾಂಕ ​8.11.2020 ರಂದು ಸಾಸ್ ಇದರ  ಅಯ್ಯಪ್ಪ ಸಂಗಮಮ್ ಅನ್ನುವ ​ಕಾರ‍್ಯಕ್ರಮದ ನೇರಪ್ರಸಾರ ಜನಮ್ ಟಿವಿಯಲ್ಲಿ ಬರಲಿದೆ. ಅದನ್ನು ವೀಕ್ಷಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇ​ಕು ​ಎಂದು ​ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾ ಘಟಕದ ​ಅಧ್ಯಕ್ಷ  ರಾಧಕೃಷ್ಣ ಮೆಂಡನ್​,  ​ಪ್ರಧಾನ ಕಾರ್ಯದರ್ಶಿ​ ​ ರಂಜಿತ್ ಶೆಟ್ಟಿ ಹಾವಂಜೆ ಸಂಘಟನಾ ಕಾರ್ಯದರ್ಶಿ​ ​ ಪ್ರಕಾಶ್ ಶೆಟ್ಟಿ  ​ಪ್ರಕಟಣೆಯಲ್ಲಿ ತಿಳಿಸಿದ್ದಾರೆ ​
 
 
 
 
 
 
 
 
 
 
 

Leave a Reply