​ವಾಸ್ತು ವಿನ್ಯಾಸ ತಜ್ಞ ಉಡುಪಿಯ ಜಯಗೋಪಾಲ್ ರನ್ನು ಸಂಪರ್ಕಿಸಿದ ಅಯೋಧ್ಯೆ ಸಮಿತಿ

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರವನ್ನು ಭಾರತೀಯ ವೈದಿಕ ವಾಸ್ತು ಶಿಲ್ಪದ ಪ್ರಕಾರವೇ ನಿರ್ಮಿಸುವ ಉದ್ದೇಶದಿಂದ ಭಾರತದ ವೈದಿಕ ವಾಸ್ತುತಜ್ಞರ ಸಮಿತಿಗೆ ಮೂಲತಃ ಉಡುಪಿ ಜಿಲ್ಲೆಯ​ಪ್ರಸ್ತುತ ಕೇರಳದ ಜಯಗೋಪಾಲ್ ಅವರನ್ನು ಸಂಪರ್ಕಿ​ಸಿದ್ದಾರೆ​.​ 
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ​ ​ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಈ ವಿಚಾರ ತಿಳಿಸಿದ್ದಾರೆ.


ಟ್ರಸ್ಟ್‌ನ ಕೋಶಾಧಿಕಾರಿ ಸ್ವಾಮಿ ಶ್ರೀಗೋವಿಂದ ದೇವ್‌ಗಿರಿ ಅವರು ಮೂಲತಃ ಉಡುಪಿ ಜಿಲ್ಲೆಯ ಪಡುಬಿದ್ರಿಯ ಪ್ರಸಕ್ತ ಕೇರಳ ರಾಜ್ಯದ ಕೊಚ್ಚಿಯಲ್ಲಿರುವ ವೈದಿಕ ವಾಸ್ತುತಜ್ಞ ಜಯಗೋಪಾಲ್ ಅವರನ್ನು ಸೂಚಿಸಿದ್ದರು.

ಈಗಾಗಲೇ ಅವರಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದ ಪೇಜಾವರ ಶ್ರೀಗಳು, ಉಡುಪಿಯ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಮತ್ತು ದ.ಕ. ಜಿಲ್ಲೆಯ ಕುಡುಪು ಕೃಷ್ಣರಾಜ ತಂತ್ರಿ ಅವರ ಹೆಸರನ್ನು ಸೂಚಿಸಲಾಗಿತ್ತು ಎಂದರು.

ಅಯೋಧ್ಯೆಯಲ್ಲಿ ಟ್ರಸ್ಟ್‌ಗೆ ಹಸ್ತಾಂತರವಾಗಿರುವ 70ಎಕರೆ ಜಾಗದಲ್ಲಿ ರಾಮಮಂದಿರವೂ ಸೇರಿದಂತೆ ಪರಿಸರದ ಅಭಿವೃದ್ಧಿಗೆ 1,300ರಿಂದ 1,400 ಕೋಟಿ ರೂ. ವ್ಯಯಿಸಲಾಗುತ್ತಿದೆ. ಮುಂದಿನ ಅಭಿವೃದ್ಧಿ ಚಟುವಟಿಕೆಗಳಿಗೆ ಮತ್ತಷ್ಟು ಹಣ ಬೇಕಾಗಬಹುದು ಎಂದು  ಶ್ರೀಗಳು ತಿಳಿಸಿದರು.​


 
 
 
 
 
 
 
 
 
 
 

Leave a Reply