ಆರೂರು ದಾಸಬೆಟ್ಟು ಪುಣ್ಯಕೋಟಿ ಗೋಸಪ್ತಾಹ ಸಮಾರೋಪ

ಪ್ರತಿ​ಯೊಂದು ಗ್ರಾಮದಲ್ಲಿ ಯುವ ಸಂಘಟನೆಗಳು ಗೋಶಾಲೆಗಳನ್ನು ತೆರೆಯುವ ಮನಸ್ಸು ಮಾಡಬೇಕು. ಸಮಾಜ, ಆಸಕ್ತರು, ದಾನಿಗಳು ಹೀಗೆ ಎಲ್ಲರ ಸಹಕಾರದಿಂದ ಮಾತ್ರ ಗೋಶಾಲೆಗಳನ್ನು ಮನ್ನಡೆಸಲು ಸಾಧ್ಯ​. ಈ ನಿಟ್ಟಿನಲ್ಲಿ ಗೋ ವರ್ಧನೆಗೆ ಎಲ್ಲರ ಸಹಕಾರ ಅತೀ ಅಗತ್ಯ  ಎಂದು ಕಟಪಾಡಿ ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು.   

ಅವರು ಆರೂರು ಗ್ರಾಮದ ದಾಸಬೆಟ್ಟು ಪುಣ್ಯಕೋಟಿ ಆರೂರು ಪುಣ್ಯಕೋಟಿ ಗೋಸಪ್ತಾಹ ಸಮಾರೋಪ
ಭಾನುವಾರ ಒಂದು ವಾರಗಳ ಕಾಲ ನಡೆದ ಗೋಕಥಾ ಸಪ್ತಾಹದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಊರಿಗೊಂದು ದೇವಸ್ಥಾನ, ಊರಿಗೊಂದು ಪಾಠಶಾಲೆ, ಊರಿಗೊಂದು ಆಸ್ಪತ್ರೆಯೊಂದಿಗೆ ಊರಿಗೊಂದು ಗೋಶಾಲೆಗಳು ಇಂದು ಅತೀ ಅಗತ್ಯವಾಗಿದೆ. 

ಇಂದಿನ ವ್ಯವಸ್ಥೆಯಲ್ಲಿ ಗೋಶಾಲೆಗಳನ್ನು ನಡೆಸುವುದು ಕಷ್ಟದ ಕೆಲಸ. ಗೋವಿನ ತಳಿಗಳನ್ನು ಉಳಿಸುವ ಕಾರ್ಯ ದೊಂದಿಗೆ ಗೋ ಸಂಪತ್ತನ್ನು ಉಳಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದು ಹೇಳಿದರು.​ ಈ ಸಂದರ್ಭ ದಲ್ಲಿ ಭಾರತೀಯ ತಳಿಯ ಗೋವುಗಳ ಸೇವೆ ಮಾಡುತ್ತಿರುವ ಕುಕ್ಕೆಹಳ್ಳಿಯ ಸವಿತಾ ನಾಯಕ್, ಕಿಶನ್ ಬೈಲಕೆರೆ ಮಲ್ಪೆ ಮತ್ತು ಉಮಾಶಂಕರ ಮುಡೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪುಣ್ಯಕೋಟಿ ಗೋಶಾಲೆಯ ಭಕ್ತಿಭೂಷಣ್ ದಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.​ ಕಾರ್ಯಕ್ರಮದಲ್ಲಿ ಅಯೋಧ್ಯೆಯ ಯೋಗಿ ಸತ್ಯೇಂದ್ರನಾಥ್ ಗುರೂಜೀ, ಮಥುರಾ ನಂದಗೋಕುಲದ ಬ್ರಜೇಶ್ ಗೋಸ್ವಾಮಿ, ಪಂಡರಾಪುರದ ಶ್ರವಣ ಭಕ್ತಿದಾಸ್ ಉಪಸ್ಥಿತರಿದ್ದರು.​ ಟ್ರಸ್ಟಿ ನಳಿನಿ ಪ್ರದೀಪ್ ರಾವ್ ಸ್ವಾಗತಿಸಿದರು. ಕೃಷ್ಣಮೂರ್ತಿ ಪರಿಚಯಿಸಿದರು.​ ಶ್ರೀನಿವಾಸ ಉಪ್ಪೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದಕ್ಕೂ ಮುನ್ನ ಗೋಸೂಕ್ತ ಹೋಮ, ಗೋ ಸುರಭಿ ಯಜ್ಞದ ಪೂರ್ಣಾಹುತಿ ಭಜನಾ ಕಾರ್ಯಕ್ರಮಗಳು ನಡೆದವು.​ ​
 
 
 
 
 
 
 
 
 
 
 

Leave a Reply